
Read Time:1 Minute, 3 Second
ಉಡುಪಿ: ಉಡುಪಿಯ ಶ್ರೀ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಈ ಮಹತ್ವದ ಭೇಟಿಯಲ್ಲಿ ಗೃಹ ಸಚಿವರ ಜೊತೆ ಅನೇಕ ಸಂಗತಿಗಳನ್ನು ಚರ್ಚೆ ಮಾಡಿದ್ದಾರೆ. ರಾಷ್ಟ್ರೀಯ ಭದ್ರತೆ, ಹಿತಾಸಕ್ತಿಯ ವಿಚಾರ ವಿಮರ್ಶೆ ನಡೆಸಿದ್ದಾರೆ.



ರಾಜ್ಯದಲ್ಲಿ ವಕ್ಫ್ ದುರುಪಯೋಗದಿಂದ ರೈತಾಪಿ ಮತ್ತು ಜನಸಾಮಾನ್ಯರ ಸಂಕಷ್ಟ ಕುರಿತೂ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ. ಮುಜರಾಯಿ ಮುಕ್ತ ಹಿಂದೂ ದೇವಳ, ಬಾಂಗ್ಲಾದೇಶದಿಂದ ನುಸುಳುವಿಕೆ, ಮಣಿಪುರ ಬಂಗಾಳ ಹಿಂಸಾಚಾರ, ಮುಂತಾದ ಎಲ್ಲ ರಾಷ್ಟ್ರೀಯ ಹಿತಾಸಕ್ತಿಯ ವಿಚಾರಗಳನ್ನು ಕಾನೂನಿನ ನೆಲೆಯಲ್ಲಿ ಪರಿಹರಿಸುವ ಭರವಸೆ ಕೇಂದ್ರ ಗೃಹ ಸಚಿವರಿಂದ ಪಡೆದರು ಎಂದು ಮಠದ ಮೂಲಗಳು ತಿಳಿಸಿವೆ.