
ಪುತ್ತೂರು: ಹಾಲುಮಡ್ಡಿ ಶೇಖರಿಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ನಾಲ್ಕು ಮಂದಿಯನ್ನು ಸೋಮವಾರ ಪುತ್ತೂರು ಅರಣ್ಯ ಇಲಾಖೆಯ ಅಧಿಕಾರಿಗಳುಬಂಧಿಸಿದ್ದಾರೆ. ಆರೋಪಿಗಳನ್ನು ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಪಾಟ್ರಕೋಡಿ * ಬಾಯಬೆ ನಿವಾಸಿ ಉಮರ್ ಫಾರೂಕ್ (44), ಪಾಟ್ರಕೋಡಿ ನಿವಾಸಿಗಳಾದ ಅಲಿ ಹೈದರ್ ಎಂ.ಕೆ.(24), ಮುಹಮ್ಮದ್ ಹಸೈನಾರ್(30) ಮತ್ತು ತಾಳಿಪಡ್ಪು ನಿವಾಸಿ ಉಮರ್ ಪಾರೂಕ್ (26) ಎಂದು ಗುರುತಿಸಲಾಗಿದೆ. ಪುತ್ತೂರು ಅರಣ್ಯ ವಿಭಾಗ ವ್ಯಾಪ್ತಿಯ ಕಲೆಂಜಿಮಲೆ ರಕ್ಷಿತಾರಣ್ಯದ ದೂಪದ ಮರದಿಂದ ಹಾಲುಮಡ್ಡಿ ಸಂಗ್ರಹಿಸಿದ್ದರು.ಆರೋಪಿಗಳಿಂದ ಸಾಗಾಟಕ್ಕೆ ಬಳಸಿದ್ದ ಆಟೊ ರಿಕ್ಷಾ ಸೇರಿದಂತೆ 11 ಸಾವಿರ ರೂ. ಮೌಲ್ಯದ ಹಾಲು ಮಡ್ಡಿ ಅಹ ಸಹಿತ ಒಟ್ಟು 1.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಇವ ವಶಪಡಿಸಿಕೊಳ್ಳಲಾಗಿದೆ. ಪುತ್ತೂರು ವಲಯಾರಣ್ಯಾಧಿಕಾರಿ ಕಿರಣ್ ಬಿ.ಎಂ.ನೇತೃತ್ವದಲ್ಲಿ ಉಪ ವಲಯಾರಣ್ಯಾಧಿಕಾರಿ ವೀರಣ್ಣ, ಪ್ರಕಾಶ್, ಗೌರೀಶ್, ದಸ್ತು ಅರಣ್ಯ ಪಾಲಕ ಸತೀಶ್, ಚಾಲಕರಾದ ರಾಜೇಶ್, ತೇಜ ಪ್ರಸಾದ್ ಹಾಗೂ ಸಿಬ್ಬಂದಿ ವಿನೋದ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

