
Read Time:55 Second
ನವದೆಹಲಿ: ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆದ 25 ನಿಮಿಷಗಳ ಕಾರ್ಯಾಚರಣೆಯಲ್ಲಿ ಭಾರತೀಯ ಪಡೆಗಳು ಜೈಶ್-ಎ-ಮೊಹಮ್ಮದ್ ಸಂಸ್ಥಾಪಕ ಮಸೂದ್ ಅಜರ್ನ ಕುಟುಂಬದ 14 ಸದಸ್ಯರನ್ನು ಹತ್ಯೆಗೈದಿವೆ ಎನ್ನಲಾಗಿದೆ.


ಆಪರೇಷನ್ ಸಿಂಧೂರ್ನಲ್ಲಿ ಕೊಲ್ಲಲ್ಪಟ್ಟವರಲ್ಲಿ ಮಸೂದ್ ಅಜರ್ ಸಹೋದರನ ಮಗ ಮತ್ತು ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ರವೂಫ್ ಅಸ್ಗರ್ ಸೇರಿದ್ದಾರೆ. ರವೂಫ್ ಅಸ್ಗರ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಭಾರತೀಯ ಸೇನೆಯ ಆಪರೇಶನ್ ಸಿಂದುರ್‌ನಲ್ಲಿ ಮಸೂದ್ ಅಜ್ಹರ್ ಅವರ ಕುಟುಂಬದ 14 ಜನರ ಸಾವಿನ ಸುದ್ದಿ ಬಂದಿದೆ. ಇದರಲ್ಲಿ ಮಸೂದ್ ಪತ್ನಿ, ಪುತ್ರ ಮತ್ತು ಸೋದರ ಸಹಿತವಾಗಿದ್ದಾರೆ ಎನ್ನಲಾಗಿದೆ.