
ಚಿಕ್ಕಮಗಳೂರು: ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಗೆ ಇನ್ಸ್ಟಾಗ್ರಾಮ್‌ನಲ್ಲಿ ಯುವಕನೊಬ್ಬ ಮೆಸೇಜ್ ಮಾಡುವ ಮೂಲಕ ಕಾಟ ಕೊಟ್ಟಿದ್ದು, ಆತನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ತರೀಕೆರೆಯ ಅತ್ತಿಗನಾಳು ಗ್ರಾಮದ ಬಳಿ ನಡೆದಿದೆ.



ಮಂಜುನಾಥ್ (21) ಎಂಬವನೇ ಕೊಲೆಯಾದ ಯುವಕ. ಹತ್ಯೆ ಮಾಡಿದ ಆರೋಪಿಯನ್ನು ವೇಣು ಎಂದು ಗುರುತಿಸಲಾಗಿದೆ.
ಮಂಜುನಾಥ್‌ಗೆ ಯುವತಿಯೊಬ್ಬಳ ಪರಿಚಯವಾಗಿತ್ತು. ಆಕೆಗೆ ವೇಣು ಎಂಬಾತನ ಜೊತೆ ವಿವಾಹ ನಿಶ್ಚಯವಾಗಿತ್ತು. ಹಾಗಿದ್ದರೂ ಮಂಜುನಾಥ್ ಪದೇ ಪದೇ ಆಕೆಗೆ ಮೆಸೇಜ್ ಮಾಡಿ ಕಿರಿಕಿರಿ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಮೆಸೇಜ್ ಮಾಡದಂತೆ ಯುವತಿ ಮಂಜುನಾಥ್‌ಗೆ ಹಲವು ಬಾರಿ ಹೇಳಿದ್ದರು, ಆತ ಮತ್ತೆ ಅದೇ ಕೆಲಸ ಮಾಡುತ್ತಿದ್ದ.


ಈ ವಿಷಯವನ್ನು ಆಕೆ ತಾನು ನಿಶ್ಚಿತಾರ್ಥ ಮಾಡಿಕೊಂಡ ಯುವಕನಿಗೆ ತಿಳಿಸಿದ್ದಾಳೆ. ಆತ ಮಂಜುನಾಥ್ ಜೊತೆ ಜಗಳವಾಡಿದ್ದು, ಜಗಳ ವಿಕೋಪಕ್ಕೆ ಹೋಗಿದೆ. ಮಂಜುನಾಥನಿಗೆ ವೇಣು ಚಾಕು ಇರಿದಿದ್ದಾನೆ. ಗಂಭೀರ ಗಾಯಗೊಂಡ ಮಂಜುನಾಥನನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಆತ ಬದುಕುಳಿಯಲಿಲ್ಲ.

ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ತರೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

