
Read Time:1 Minute, 7 Second
ಮಂಜೇಶ್ವರ: ಯುವಕ ಸಂಘ (ರಿ.) ಬಡಾಜೆ ಮಂಜೇಶ್ವರ ಇದರ 78 ನೇ ಸ್ವಾತಂತ್ರೋತ್ಸವದ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 9.00 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು. ಹೊಸಂಗಡಿ Cure & Care ಆಸ್ಪತ್ರೆಯ ಡೈರೆಕ್ಟರ್ & ಡಾಕ್ಟರ್ ಶ್ರೀಯುತ ವೆಂಕಟ್ ರೆಡ್ಡಿ ಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.



ಇದೇ ವೇಳೆ ಎಸ್ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ ಸ್ಫೂರ್ತಿ ವಿದ್ಯಾನಿಕೇತನ ಶಾಲೆಯ ಮುಖ್ಯಸ್ಥರಾದ ಶ್ರೀಯುತ ಮಧುಸೂದನ್ ಬಳ್ಳಕುರಾಯ, ಸಂಘದ ಅಧ್ಯಕ್ಷರಾದ ಉಮೇಶ್ ಕಲ್ಲಕಂಡ, ಕಾರ್ಯದರ್ಶಿಯಾದ ಚೇತನ್ ಕಲ್ಲಕಂಡ, ಸಂಘದ ಪದಾಧಿಕಾರಿಗಳು, ಸದಸ್ಯರುಗಳು ಹಾಗೂ ಮಾತೃ ಮಂಡಳಿಯ ಸದಸ್ಯರುಗಳು ಭಾಗವಹಿಸಿದ್ದರು..