
Read Time:1 Minute, 17 Second
ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಸಬ್ ರಿಜಿಸ್ಟರ್ ಕಛೇರಿ ಮುಂಭಾಗದಲ್ಲಿರುವ ಸುಸಜ್ಜಿತ ಶೌಚಾಲಯವು ಬಳಸಲು ಯೋಗ್ಯವಲ್ಲದ ಸ್ಥಿತಿಯಲ್ಲಿದ್ದು,ಜನಸಾಮಾನ್ಯರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿರುವ ದೃಶ್ಯ ನಿತ್ಯ ಇಲ್ಲಿ ಸರ್ವೇಸಾಮಾನ್ಯವಾಗಿದೆ.



ದಿನ ನಿತ್ಯ ಇಲ್ಲಿಗೆ ನೂರಾರು ಜನರು ನೋಂದಣಿ ಮಾಡಲು ಬರುವಾಗ ಸೂಕ್ತ ಶೌಚಾಲಯದ ವ್ಯವಸ್ಥೆ ಇದ್ದರು ಅದು ಬಳಕೆಗೆ ಯೋಗ್ಯವಲ್ಲದೆ ಪಾಲು ಬಿದ್ದ ಶಿಥಿಲಾವ್ಯವಸ್ಥೆಯಲ್ಲಿದೆ.
ಶೌಚಾಲಯವು ಸ್ವಚ್ಛತೆ ಕಾಣದೇ ಬಹುದಿನಗಳೆ ಕಳೆದಿದೆ. ಇಲ್ಲಿನ ಈ ಅವ್ಯವಸ್ಥೆಗೆ ಜನರು ಬೇಸತ್ತು ಹೋಗಿದ್ದಾರೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸದೇ ನಿರ್ಲಕ್ಷ್ಯ ವಹಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.



ಆದಷ್ಟು ಬೇಗ ಕಾಸರಗೋಡು ಜಿಲ್ಲಾಡಳಿತ ಸೂಕ್ತವಾದ ಕ್ರಮ ಕೈಗೊಂಡು ಸಂಬಂಧಪಟ್ಟವರ ಗಮನಕ್ಕೆ ತಂದು ವ್ಯವಸ್ಥಿತವಾದ ಶೌಚಾಲಯ ಮತ್ತು ಸ್ವಚ್ಚತೆಗೆ ಒತ್ತು ನೀಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
