
Read Time:1 Minute, 10 Second
ಮಂಗಳೂರು: ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಅಕ್ಟೋಬರ್ 3 ರಿಂದ ಮಂಗಳೂರು ದಸರಾ ವೈಭವ ಪ್ರಾರಂಭವಾಗಲಿದೆ.


ಅಕ್ಟೋಬರ್ 3 ರಂದು ನವದುರ್ಗೆಯರು ಹಾಗೂ ಶಾರದಾಮಾತೆಯ ಪ್ರತಿಷ್ಠಾಪನೆಯೊಂದಿಗೆ ದಸರಾ ಮಹೋತ್ಸವ ಪ್ರಾರಂಭವಾಗಲಿದೆ. ಕುದ್ರೋಳಿಯಲ್ಲಿ ಅಕ್ಟೋಬರ್ 3 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ನವದುರ್ಗೆ ಹಾಗೂ ಶಾರದಾಮಾತೆಯ ಪ್ರತಿಷ್ಠಾಪನೆ ನಡೆಯಲಿದೆ. ಅಕ್ಟೋಬರ್ 13 ರಂದು ಸಂಜೆ 4 ಗಂಟೆಯಿಂದ ಶಾರಾದಾ ಮಾತೆ ಹಾಗೂ ನವದುರ್ಗೆಯರ ಶೋಭಾಯಾತ್ರೆ ನಡೆಯಲಿದೆ.
ಮಂಗಳೂರು ದಸರಾ ವೈಭವದ 11 ದಿನವೂ ಕುದ್ರೋಳಿ ದೇವಸ್ಥಾನದಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯಲಿದೆ. ಈಗಾಗಲೇ ಮೈಸೂರು ದಸರಾ ನಂತರ ಅತೀ ಹೆಚ್ಚು ಖ್ಯಾತಿಯನ್ನು ಮಂಗಳೂರು ದಸರಾ ಪಡೆದುಕೊಂಡಿದೆ. ಈಗಾಗಲೇ ದಸರಾ ಸಿದ್ದತೆಗಳು ಪೂರ್ಣಗೊಂಡಿದ್ದು, ಮಂಗಳೂರು ನಗರದಾದ್ಯಂತ ಬೆಳಕಿನ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.

