ಮಂಗಳೂರು:ಹಲವಾರು ರೈಲು ಸೇವೆಯಲ್ಲಿ ಬದಲಾವಣೆ

0 0
Read Time:3 Minute, 33 Second

ಮಂಗಳೂರು: ದಕ್ಷಿಣ ರೈಲ್ವೆಯ ಪಾಲಕ್ಕಾಡ್‌ ವಿಭಾಗದ ವಿವಿಧ ಪ್ರದೇಶಗಳಲ್ಲಿ ಹಳಿ ನಿರ್ವಹಣ ಕಾರ್ಯಗಳನ್ನು ನಿರ್ವಹಿಸುವ ಹಿನ್ನಲೆಯಲ್ಲಿ ವಿವಿಧ ರೈಲು ಸೇವೆಯಲ್ಲಿ ಬದಲಾವಣೆ ಮಾಡಲಾಗಿದೆ. ಜೂ. 16 ರಂದು ಎರ್ನಾಕುಲಂ ಜಂಕಕ್ಷನ್‌ನಿಂದ ಸಂಜೆ 6.50ಕ್ಕೆ ಹೊರಡುವ 11098 ಎರ್ನಾಕುಲಂ ಜಂಕ್ಷನ್‌ -ಪುಣೆ ಸಾಪ್ತಾಹಿಕ ಎಕ್ಸ್‌ಪ್ರೆಸ್‌ ರೈಲು 2 ಗಂಟೆಗಳ ಕಾಲ ವಿಳಂಬವಾಗಲಿದ್ದು, ರಾತ್ರಿ 8.50ಕ್ಕೆ ನಿಗದಿಯಾಗಿದೆ.

ಜೂ.5ರಂದು ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ಮಂಗಳೂರು ಸೆಂಟ್ರಲ್‌-ಕೊಯಮತ್ತೂರು ಜಂಕ್ಷನ್‌ ಎಕ್ಸ್‌ಪ್ರೆಸ್‌ ರೈಲು(ನಂ.16324) 1 ಗಂಟೆ ಕಾಲ ವಿಳಂಬವಾಗಲಿದೆ. ಜೂ.7ರಂದು ಕೊಯಮತ್ತೂರು ಜಂಕ್ಷನ್‌ನಿಂದ ಹೊರಡುವ ಕೊಯಮತ್ತೂರು ಜಂಕ್ಷನ್‌-ಮಂಗಳೂರು ಸೆಂಟ್ರಲ್‌ ಎಕ್ಸ್‌ಪ್ರೆಸ್‌ ರೈಲು(ನಂ.16323) 1 ಗಂಟೆ 20 ನಿಮಿಷ ವಿಳಂಬವಾಗಲಿದೆ. ಜೂ. 8ರಂದು ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ಮಂಗಳೂರು ಸೆಂಟ್ರಲ್‌-ಕೊಯಮತ್ತೂರು ಜಂಕ್ಷನ್‌ ಇಂಟರ್‌ಸಿಟಿ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌(ನಂ.22609) ರೈಲು 30 ನಿಮಿಷಗಳ ಕಾಲ ವಿಳಂಬವಾಗಲಿದೆ. ಜೂ. 30ರಂದು ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ಮಂಗಳೂರು ಸೆಂಟ್ರಲ್‌-ಯಶವಂತಪುರ ಜಂಕ್ಷನ್‌(ನಂ.16566) ಸಾಪ್ತಾಹಿಕ ಎಕ್ಸ್‌ಪ್ರೆಸ್‌ ರೈಲು 30 ನಿಮಿಷ ಕಾಲ ವಿಳಂಬವಾಗಲಿದೆ.ಜು.4ರಂದು ಮಂಗಳೂರು ಸೆಂಟ್ರಲ್‌-ಡಾ|ಎಂ.ಜಿ.ಆರ್‌. ಚೆನ್ನೈ ಸೆಂಟ್ರಲ್‌ ವೆಸ್ಟ್‌ ಕೋಸ್ಟ್‌ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲು(ನಂ. 22638) 1 ಗಂಟೆ 10 ನಿಮಿಷಗಳ ಕಾಲ ವಿಳಂಬವಾಗಲಿದೆ. ಜೂ.23ರಂದು ತಿರುವನಂತಪುರಂ ಸೆಂಟ್ರಲ್‌ನಿಂದ ಹೊರಡುವ ತಿರುವನಂತಪುರಂ ಸೆಂಟ್ರಲ್‌-ವೆರಾವಲ್‌ ಸಾಪ್ತಾಹಿಕ ಎಕ್ಸ್‌ಪ್ರೆಸ್‌(ನಂ.16334) ರೈಲು 30 ನಿಮಿಷಗಳ ಕಾಲ ವಿಳಂಬವಾಗಲಿದೆ. ಜೂ. 14ರಂದು ತಿರುವನಂತಪುರಂ ಉತ್ತರದಿಂದ ಹೊರಡುವ ತಿರುವನಂತಪು ರಂ ಉತ್ತರ-ಶ್ರೀ ಗಂಗಾನಗರ ಸಾಪ್ತಾಹಿಕ ಎಕ್ಸ್‌ಪ್ರೆಸ್‌(ನಂ. 16312) ರೈಲು 1 ಗಂಟೆ 45 ನಿಮಿಷಗಳ ಕಾಲ ವಿಳಂಬವಾಗ ಲಿದೆ. ಜೂ.21ರಂದು ತಿರುವನಂತಪುರಂ ಉತ್ತರದಿಂದ ಹೊರಡುವ ತಿರುವನಂತಪುರಂ ಉತ್ತರ-ಶ್ರೀ ಗಂಗಾನಗರ ಸಾಪ್ತಾಹಿಕ ಎಕ್ಸ್‌ಪ್ರಸ್‌(ನಂ. 16312) ರೈಲು 45 ನಿಮಿಷ ವಿಳಂಬವಾಗಲಿದೆ.ಜೂ. 10ರಂದು ನಾಗರ್‌ಕೋಯಿಲ್‌ ಜಂಕ್ಷನ್‌ನಿಂದ ಹೊರಡುವ ನಾಗರ್‌ಕೋಯಿಲ್‌ ಜಂಕ್ಷನ್‌- ಗಾಂಧಿಧಾಮ್‌ ಸಾಪ್ತಾಹಿಕ ಎಕ್ಸ್‌ಪ್ರೆಸ್‌(16336) ರೈಲು 1 ಗಂಟೆ 10 ನಿಮಿಷಗಳ ಕಾಲ ವಿಳಂಬವಾಗಲಿದೆ. ಜೂ. 6 ರಂದು ಜಾಮ್‌ನಗರದಿಂದ ಹೊರಡುವ ಜಾಮ್‌ನಗರ- ತಿರುನಲ್ವೇಲಿ ಜಂಕ್ಷನ್‌ ಸಾಪ್ತಾಹಿಕ ಎಕ್ಸ್‌ಪ್ರೆಸ್‌(ಸಂಖ್ಯೆ 19578) ರೈಲು 1 ಗಂಟೆ 20 ನಿಮಿಷಗಳ ಕಾಲ ವಿಳಂಬವಾಗಲಿದೆ. ಜೂ.6 ರಂದು ಬಾರ್ಮೆರ್‌ನಿಂದ ಹೊರಡುವ ಬಾರ್ಮರ್‌-ಇರೋಡ್‌ ಜಂಕ್ಷನ್‌ ಸಾಪ್ತಾಹಿಕ ಸೂಪರ್‌ಫಾಸ್ಟ್‌(ನಂ.06098) ವಿಶೇಷ ರೈಲು 1 ಗಂಟೆ 30 ನಿಮಿಷಗಳ ಕಾಲ ವಿಳಂಬವಾಗಲಿದೆ ಎಂದು ರೈಲ್ವೇ ಇಲಾಖೆ ಪ್ರಕಟಣೆ ತಿಳಿಸಿದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *