
ಮಂಗಳೂರು: ಮೈಸೂರಿನಲ್ಲಿ ಮಹಿಷ ದಸರಾ ಆಚರಣೆಯ ಬಗ್ಗೆ ಪ್ರೊ.ಭಗವಾನ್ ವಿರುದ್ಧ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಮಂಗಳೂರಿನಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರೊ.ಭಗವಾನ್ ಅವರಂತರ ಹುಚ್ಚರು ಮೊದಲಿನಿಂದಲೂ ಇದ್ದಾರೆ. ಆಗಲೂ ಇದ್ದರು ಈಗಲೂ ಇದ್ದಾರೆ. ಅದೊಂದು ರಾಕ್ಷಸಿ ವಂಶ ಅದಕ್ಕೋಸ್ಕರ ರಾಕ್ಷಸರನ್ನು ಆರಾಧನೆ ಮಾಡುತ್ತಾರೆ. ಯಾರೂ ಮನುಷ್ಯರಾಗಿದ್ದರೋ ಅವರು ರಾಕ್ಷಸರನ್ನು ಪೂಜಿಸೋದಿಲ್ಲ. ರಾಕ್ಷಸರು ರಾಕ್ಷಸರನ್ನೇ ಪೂಜಿಸುತ್ತಾರೆ. ರಾಕ್ಷಸರು ಒಂದು ದಿನ ನಾಶವಾಗುತ್ತಾರೆ. ಭಗವಾನ್ ಈ ಹಿಂದಿನಿಂದಲೂ ಹುಚ್ಚುಹುಚ್ಚು ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಅವನು ಎಲ್ಲಿ ಹುಟ್ಟಿದ್ದಾನೆ ಅನ್ನುವುದು ಅವನಿಗೆ ಗೊತ್ತಿಲ್ಲ. ಅವನ ಅಪ್ಪ ಅಮ್ಮ ಯಾರೆಂದೂ ಗೊತ್ತಿಲ್ಲ. ಅದಕ್ಕಾಗಿ ಈ ರೀತಿ ಮಾತನಾಡುತ್ತಾನೆ. ಅವನ ಅಪ್ಪ ಅಮ್ಮ ಅವನಿಗೆ ಒಳ್ಳೆಯದಾಗಲೆಂದು ಭಗವಾನ್ ಎಂದು ಹೆಸರಿಟ್ಟಿದ್ದಾರೆ. ಇವನು ನೋಡಿದರೆ ರಾಕ್ಷಸಿ ದೃಷ್ಟಿಯಲ್ಲಿ ಯೋಚಿಸುತ್ತಾನೆ. ಹಿಂದೆ ರಾಕ್ಷಸರಿದ್ದರು ಸಜ್ಜನರೂ ಇದ್ದರು. ಕೊನೆಗೆ ಗೆಲುವಾಗಿದ್ದು ಸಜ್ಜನರಿಗೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು.



