
Read Time:55 Second
ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆಯಿಂದ ಮಹಾ ಸಂಘರ್ಷ ಯಾತ್ರೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕೈಗೊಳ್ಳಲಾಗಿದ್ದು, ಕರವೇ ಅಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.



ವಾಣಿಜ್ಯ ಕ್ಷೇತ್ರಗಳಲ್ಲಿ ಕನ್ನಡಕ್ಕೆ ಒತ್ತು ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಿದ್ದು, ಮೂರು ಬೇಡಿಕೆಗಳನ್ನ ಮುಂದಿಟ್ಟು ಹೋರಾಟ ಮಾಡಲಾಗುತ್ತಿದೆ.
ಉತ್ಪನ್ನಗಳ ಮೇಲೆ ಕಡ್ಡಾಯ ಕನ್ನಡ ಬಳಕೆ, ಕನ್ನಡಿಗರಿಗೆ ಎಲ್ಲಾ ಕ್ಷೇತ್ರದಲ್ಲೂ ಕೆಲಸ ನೀಡಬೇಕು. ಕನ್ನಡಿಗರ ಕೈಗೆ ಉದ್ಯಮ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಲಾಗುತ್ತಿದೆ.


ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲಾ, ತಾಲೂಕು ಕಚೇರಿ ಮುಂದೆ ಕರವೇ ಪ್ರತಿಭಟನೆ ನಡೆಸಲಿದೆ.
