
ಮಂಗಳೂರು: ಲಯನ್ಸ್ ಮತ್ತು ಲಿಯೋ ಕ್ಲಬ್ ಮಂಗಳೂರು ಪಂಪ್ ವೆಲ್ ಕಲ್ಪವೃಕ್ಷ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಕ್ಲಬ್ ನ ಕೋಶಾಧಿಕಾರಿಗಳಾದ ಲಯನ್ ವೀಣಾ ಮಂಗಳ ರವರು ನೆರವೇರಿಸಿದರು.



ಮುಖ್ಯ ಅತಿಥಿ ಗಳಾಗಿ ನಮ್ಮ ಪ್ರಾಂತ್ಯ ದ ವಲಯಧ್ಯಕ್ಷರಾದ ಲ. ಅನಿಲ್ ದಾಸ್, ಮಾಜಿ ನಗರ ಪಾಲಿಕೆ ಸದಸ್ಯರಾದ ಜೆ. ನಾಗೇಂದ್ರ, ಜೆ. ಸುರೇಂದ್ರ ರವರು ಉಪಸ್ಥಿತರಿದ್ದರು..
ಈ ವೇಳೆಯಲ್ಲಿ ಶಾಲೆಯ ಹಳೆ ವಿದ್ಯಾರ್ಥಿ ಶ್ರೀ ರಾಮಚಂದ್ರ ಶೆಟ್ಟಿಯವರನ್ನು ಗೌರವಿಸಲಾಯಿತು..
ಹಾಗೆಯೇ ಸಂಸ್ಥೆ ಯ ಲಿಯೋ ಸದಸ್ಯರು ಜಪ್ಪಿನಮೊಗರು ಬಸ್ ನಿಲ್ದಾಣಕ್ಕೆ ಗೋಡೆ ಗಡಿಯಾರ ವನ್ನು ನಗರ ಪಾಲಿಕ ಸದಸ್ಯರಿಗೆ ಹಸ್ತಾಂತರ ಮಾಡಿದರು..

ಸಭೆಯಲ್ಲಿ ಕಾರ್ಯದರ್ಶಿ ರಮ್ಯಾ ಶೆಟ್ಟಿ, ಸ್ಥಾಪಕ ಅಧ್ಯಕ್ಷರು ರಾಜೇಶ್ ಶೆಟ್ಟಿ, ಸದಸ್ಯರಾದ ಮೋಹನ್ ಕಿಲ್ಲೆ ಸಹಿತ 25 ಮಿಕ್ಕಿದ ಸದಸ್ಯರು ಪಾಲ್ಗೊಂಡರು..
ಆ ಬಳಿಕ ನಮ್ಮ ಸಂಸ್ಥೆಯ ವತಿಯಿಂದ ಜಪ್ಪಿನಮೊಗರು ಜಯ – ವಿಜಯ ಕಂಬಳದ ಗದ್ದೆಯ ಪಕ್ಕ ವಲಯಧ್ಯಕ್ಷರಾದ ಲ. ಅನಿಲ್ ದಾಸ್ ರವರು ಗಿಡ ನೆಡುವ ಮುಖೇನ ವನಮಹೋತ್ಸವವನ್ನು ನೆರವೇರಿಸಿದರು.


ಈ ವೇಳೆಯಲ್ಲಿ ಕಾರ್ಯದರ್ಶಿ ರಮ್ಯಾ ಶೆಟ್ಟಿ, ಕೋಶಾಧಿಕಾರಿ ವೀಣಾ ಮಂಗಳ, ಲಿಯೋ ಅಧ್ಯಕ್ಷರು ಹಾರ್ದಿಕ ಶೆಟ್ಟಿ, ಸ್ಥಾಪಕ ಅಧ್ಯಕ್ಷರು ರಾಜೇಶ್ ಶೆಟ್ಟಿ, ಮಾಜಿ ಅಧ್ಯಕ್ಷರು ಜೆ. ಸತ್ಯ ಪ್ರಸಾದ್ ಶೆಟ್ಟಿ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.

ಬಳಿಕ ಮನೆ ಮನೆ ತೆರಳಿ ಗಿಡಗಳನ್ನು ಹಂಚಲಾಯಿತು.
ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡಿತು.