
ಉಳ್ಳಾಲ: ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ(ರಿ) ಉಳ್ಳಾಲ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಸಮಾಜ ಬಂಧುಗಳ ವಿಶೇಷ ಸಭೆಯನ್ನು ವೇದಿಕೆಯ ಜಿಲ್ಲಾಧ್ಯಕ್ಷರಾದ ಲ|| ಅನಿಲ್ ದಾಸ್‌ರವರ ಉಪಸ್ಥಿತಿಯಲ್ಲಿ ಉಳ್ಳಾಲ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ನವೀನ್ ಕುಲಾಲ್ ಪಿದಮಲೆಯವರ ನೇತೃತ್ವದಲ್ಲಿ ನಡೆಸಲಾಯಿತು.



ಈ ಸಭೆಯಲ್ಲಿ ಸಮಾಜದ ಸಂಘಟನೆ ಮತ್ತು ಜವಾಬ್ದಾರಿ ಹಾಗೂ ಸರಕಾರದ ಕೆಲವು ಯೋಜನೆಗಳನ್ನು ಸಮಾಜ ಬಂಧುಗಳಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಿಕೊಳ್ಳಬೇಕಾದ ಅಗತ್ಯದ ಬಗ್ಗೆ ಜಿಲ್ಲಾಧ್ಯಕ್ಷರು ಮಾಹಿತಿ ನೀಡಿದರು.
ಕುಲಾಲ ಸಮಾಜದ ಉನ್ನತಿ ಸಾಧ್ಯವಾಗಬೇಕಾದರೆ ನಾವೆಲ್ಲರೂ ಒಮ್ಮತದಿಂದ ಪರಸ್ಪರ ಸಹಕಾರದಿಂದ ಮುನ್ನಡೆಯಬೇಕು ಎಂದವರು ಹೇಳಿದರಲ್ಲದೆ, ಮುಂದಿನ ದಿನಗಳಲ್ಲಿ ಸಮಾಜ ಬಂಧುಗಳು ಎಲ್ಲರೂ ಒಟ್ಟು ಸೇರಿ ಕೆಲಸ ಮಾಡುವ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದವರು ನುಡಿದರು.



ಈ ಸಭೆಯಲ್ಲಿ ನಮ್ಮ ಸಮಾಜದ ಯುವ ಸಾಹಿತಿ ಹಾಗೂ ಸಂಶೋಧಕರಾದ ಮಹೇಶ್ ಕುಲಾಲ್ ಅರ್ತಿಮೂಲೆ ಭಾಗವಹಿಸಿದ್ದರು. ಅವರನ್ನು ಸಭೆಯಲ್ಲಿ ಗೌರವಿಸಲಾಯಿತು.

ಹಿರಿಯರಾದ ಸುಂದರ ಕುಲಾಲ್ ಕೊಡಕಲ್ಲು, ಜಯ ಕುಲಾಲ್ ಪಾದಲ್ಪಾಡಿ, ಕೊಲ್ಯ ಕುಲಾಲ ಸಂಘದ ಪ್ರಧಾನ ಕಾರ್ಯದರ್ಶಿ ರಂಜಿತ್ ಉಚ್ಚಿಲ್, ಕುಲಾಲ ಸಂಘ ಕೊಲ್ಯದ ಸೇವಾ ದಳಪತಿ ಹಾಗೂ ಯುವವೇದಿಕೆಯ ಉಪಾಧ್ಯಕ್ಷರಾದ ಪ್ರವೀಣ್ ಕೊಲ್ಯ, ಯುವವೇದಿಕೆಯ ಉಪಾಧ್ಯಕ್ಷರಾದ ಹರೀಶ್ ಕುಲಾಲ್ ಮೂಳೂರು, ಕೇಂದ್ರ ಸಮಿತಿ ಉಸ್ತುವಾರಿ ಜಯಂತ ಸಂಕೋಳಿಗೆ, ಹೇಮಚಂದ್ರ ಕೈರಂಗಳ, ವಿನೋದ್ ಪಾದಲ್ಪಾಡಿ, ಚಿಂತನ್ ಮಜಲು ಕುರ್ನಾಡು, ವಿಶ್ವತ್ ಕೊಲ್ಯ, ಉಪಸ್ಥಿತರಿದ್ದರು.
ಶ್ರೀ ವಿದ್ಯೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅಸೈಗೋಳಿ ಇದರ ನಿವೃತ್ತ ಮುಖ್ಯೋಪಾಧ್ಯಾಯರಾದ ದಯಾನಂದ ಅಸೈಗೋಳಿ ಮತ್ತು ಹಿರಿಯ ವಕೀಲರಾದ ಉದಯಾನಂದ ಅಸೈಗೋಳಿ ಸ್ಥಳಾವಕಾಶದ ಸಹಕಾರವಿತ್ತರು.