
ಬಂಟ್ವಾಳ ಕುಲಾಲ ಸುಧಾರಕ ಸಂಘ ಹೊಸಳ್ಳಿ ಇದರ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಯನ್ ಅನಿಲ್ ದಾಸ್ ರವರಿಗೆ ಸನ್ಮಾನಿಸಿದರು.



ಬಂಟ್ವಾಳ ಕುಲಾಲ ಸುಧಾರಕ ಸಂಘ ಹೊಸಳ್ಳಿ ಇದರ ನಿಕಟ ಪೂರ್ವಾಧ್ಯಕ್ಷರಾದ ಮಚೇಂದ್ರನಾಥ ಸಾಲಿಯಾನ್ , ರಾಧಾಕೃಷ್ಣ ಬಂಟ್ವಾಳ ,
ಪ್ರಧಾನ ಕಾರ್ಯದರ್ಶಿ ಯಾದವ ಅಗ್ರಬೈಲ್ ,ಪದಾಧಿಕಾರಿಗಳಾದ ಸತೀಶ್ ಸಂಪಾಜೆ , ಸೋಮನಾಥ ಸಾಲ್ಯಾನ್ , ಮಾಧವ ಬಿ ಸಿ ರೋಡ್ , ಜಯಂತ್ ಅಗ್ರಬೈಲ್ , ಪ್ರೇಮ ಜನಾರ್ಧನ , ಆಶಾ ಗಿರಿಧರ್ , ಮೀನಾಕ್ಷಿ ಪದ್ಮನಾಭ ಮತ್ತಿತರರು ದಾಸ್ ಪ್ರಮೋಷನ್ಸ್ ಕೇಂದ್ರ ಕಚೇರಿಗೆ ಆಗಮಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಯನ್ ಅನಿಲ್ ದಾಸ್ ರವರಿಗೆ ಶಾಲು ಹೊದಿಸಿ ಫಲ ಪುಷ್ಪ ನೀಡಿ ಸನ್ಮಾನಿಸಿ ಅಭಿನಂದಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅನಿಲ್ ದಾಸ್ ರವರು ಬಂಟ್ವಾಳ ಕುಲಾಲ ಸಂಘ. ಸಂಘಟನೆಗೆ ಸಮುದಾಯದಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ಯುವಕರನ್ನು, ಹಿರಿಯರನ್ನು ಒಗ್ಗೂಡಿಸಿ ಸ್ವಾರ್ಥ ರಹಿತ ಸಮಾಜವನ್ನು ನಿರ್ಮಿಸುವ ಅನಿವಾರ್ಯತೆ ಹಾಗೂ ಸದೃಢ ಸಮಾಜದ ಒಗ್ಗಟ್ಟು, ಬಲಿಷ್ಠತೆಗಾಗಿ ನಾವೆಲ್ಲರೂ ದ್ವೇಷ ಬಿಟ್ಟು ನಮ್ಮ ಶತ್ರುಗಳಿದ್ದರೂ ಅವರನ್ನು ಪ್ರೀತಿಸುವ ಜವಾಬ್ದಾರಿ ನಮಗಿದೆ ಎಂದು ನುಡಿದರು. ಬಂಟುವಾಳ ಸಂಘ ದ ಪದಾಧಿಕಾರಿಗಳನ್ನು ಆದರದಿಂದ ಗೌರವಿಸಿದರು.


