
Read Time:55 Second
ಮಂಗಳೂರು ವಕೀಲರ ಸಂಘದ ಸದಸ್ಯರಾದ ಶ್ರೀ ಜಯಪ್ರಕಾಶ್ ಹಾಗೂ ಶ್ರೀಮತಿ ಸ್ವಾತಿ ಇವರ ಮೇಲೆ ವೆಲೇರಿಯನ್ ಮೆಂಡೋನ್ಸ ಎಂಬುವನು ಹಲ್ಲೆ ಮಾಡಿದ್ದು ಈಗಾಗಲೇ ಆತನ ಮೇಲೆ ಮಂಗಳೂರು ಕಂಕನಾಡಿ ನಗರ ಠಾಣೆಯಲ್ಲಿ ಜಾಮೀನು ರಹಿತ ದೂರು ದಾಖಲಾಗಿದ್ದು, ಆರೋಪಿಯ ಮುಲಾಜಿಗೆ ಪೊಲೀಸರು ಈವರೆಗೂ ಆತನ ಯಾವುದೇ ಕ್ರಮ ಕೈಗೊಳ್ಳದೆ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವವೇದಿಕೆ ಹಾಗೂ ಮಹಿಳಾ ಸಂಘಟನೆಗಳ ಒಕ್ಕೂಟ(ರಿ) ಮಂಗಳೂರು ಇದರ ನಾಯಕರುಗಳು ಜಿಲ್ಲಾಧಿಕಾರಿಯವರನ್ನು ಮತ್ತು ಮಂಗಳೂರು ಪೋಲಿಸ್ ಆಯುಕ್ತರನ್ನು ಭೇಟಿ ಮಾಡಿ ಹಲ್ಲೆಗೈದ ಆರೋಪಗಳನ್ನು ಶೀಘ್ರವೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲು ಮನವಿ ಮಾಡಿಕೊಂಡರು.


