
ಮಂಗಳೂರು: ಸಮಾಜ ಸೇವೆಗೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಲ. ಅನಿಲ್ ದಾಸ್ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದರು


ಸಮಾಜ ಸೇವೆ, ಶೈಕ್ಷಣಿಕ, ಧಾರ್ಮಿಕ ಸಾಮಾಜಿಕ ಸೇವೆಯಗಳಲ್ಲಿ ಮುಂಚೂಣಿಯಲ್ಲಿರುವ ಲ.ಅನಿಲ್ ದಾಸ್ ರವರು ದಾಸ್ ಚಾರಿಟೇಬಲ್ ಟ್ರಸ್ಟ್ ಮೂಲಕ ಹಲವಾರು ಯುವಕ, ಯುವತಿಯರಿಗೆ ಉದ್ಯೋಗ ಸೃಷ್ಟಿಸಿ, ವಯಸ್ಕರ ಸೇವಾ ಕಾರ್ಯಗಳಲ್ಲಿ ಕರ್ನಾಟಕದಲ್ಲೆ ಮೊದಲ ಸ್ಥಾನ ಪಡೆದಿದೆ.
ಇವರ ಈ ಸೇವೆಗೆ ಕರ್ನಾಟಕ ಸರ್ಕಾರವು ಗುರುತಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿದೆ. ಇಂದು ಲ. ಅನಿಲ್ ದಾಸ್ ರವರು ಉಸ್ತುವಾರಿ ಸಚಿವರು ಮತ್ತು ಗಣ್ಯರ ಸಮ್ಮುಖದಲ್ಲಿ 2025-26 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸಿದರು.

ಪ್ರಶಸ್ತಿ ಬಗ್ಗೆ ಸಂತಸ ವ್ಯಕ್ತಪಡಿಸಿದ ಲ.ಅನಿಲ್ ದಾಸ್ ರವರು, ನಮ್ಮ ಸಂಸ್ಥೆಯಲ್ಲಿ ಸಮಾನ ಮನಸ್ಕರು, ಯುವಕರ ತಂಡವೂ ಸಂಸ್ಥೆಯ ಮೂಲಕ ಮಾಡುವ ಪ್ರತಿಯೊಂದು ಕಾರ್ಯಕ್ಕೂ ಕೈ ಜೋಡಿಸುತ್ತಿದ್ದಾರೆ. ಆದ್ದರಿಂದ ನಮ್ಮ ಸಂಸ್ಥೆಗೆ ಈ ಪ್ರಶಸ್ತಿ ಬರಲು ಸಾಧ್ಯವಾಯಿತು. ಇದು ನಮಗೆ ಇನ್ನಷ್ಟು ಉತ್ತಮ ಸಾಮಾಜಿಕ ಕಾರ್ಯಗಳನ್ನು ನಡೆಸಲು ಪ್ರೇರಣೆಯಾಗಲಿದೆ ಎಂದರು.ಲ. ಅನಿಲ್ ದಾಸ್ ಅಭಿಮಾನಿಗಳು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಂದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.


ವಿಧಾನಸಭಾ ಸ್ಪೀಕರ್ ಖಾದರ್ ರವರಿಂದ ಅಭಿನಂದನೆ



ಕುಲಾಲ ಕುಂಬಾರ ಯುವ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಹಾಗೂ ಕುಲಾಲ ಮಂದಿರ ಕೊಲ್ಯ ಅಧ್ಯಕ್ಷರು ಸರ್ವ ಸದಸ್ಯರು, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಹಾಗೂ ಆಟೋ ಘಟಕ. ಉಳ್ಳಾಲ ಘಟಕ. ಸರ್ವ ಸದಸ್ಯರು, ಪುತ್ತೂರು ಕುಲಾಲ ಸಂಘ, ಮಂಜೇಶ್ವರ ಕುಲಾಲ ಕುಂಬಾರ ಯುವ ವೇದಿಕೆ ಘಟಕ, ದಾಸ್ ಪ್ರಮೋಷನ್ಸ್ ಸುಗ್ಗಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ಇದರ ನಿರ್ದೇಶಕರುಗಳು ಹಾಗೂ ಮ್ಯಾನೇಜರ್ ಗಳು ಸಿಬ್ಬಂದಿಗಳು, ಕುಲಾಲ ಸಮುದಾಯದ ನಾಯಕರುಗಳು ಮುಖಂಡರುಗಳು, ಲಯನ್ಸ್ ಕ್ಲಬ್ ಮಂಗಳಾದೇವಿ ಕ್ಲಬ್ಬಿನ ಅಧ್ಯಕ್ಷರುಗಳು ಸರ್ವ ಸದಸ್ಯರು ಹಾಗೂ ಅಭಿಮಾನಿ ಗೆಳೆಯರು ಬಂಧುಗಳು ಹಿತೈಷಿಗಳು ಎಲ್ಲಾ ಪಕ್ಷಗಳ ರಾಜಕೀಯ ಮುಖಂಡರು ಕಾರ್ಯಕರ್ತರು, ಸುಗ್ಗಿ ಸೌಹಾರ್ದ ಸಹಕಾರಿ ಯ ಎಲ್ಲಾ ನಿರ್ದೇಶಕ ಮಿತ್ರರು ಹಾಗೂ ಸಹಕಾರಿ ಯ ಸಿಬ್ಬಂದಿಗಳು ಶುಭಾಶಯ ಕೋರಿದರು.



