
ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಹಾಗೂ ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ (ರಿ) ಮಂಗಳೂರು ಇದರ ಸಹಯೋಗದಲ್ಲಿ “ಕುಂಭಕಲಾವಳಿ ಕುಲಾಲ ಕಲಾ ಸೇವಾಂಜಲಿ” ಕಾಯ೯ಕ್ರಮ ಮಂಗಳೂರಿನ ಕುದ್ಮುಲ್ ರಂಗರಾವ್, ಪುರಭವನದಲ್ಲಿ ಜ. 04ರಂದು ನಡೆಯಲಿದೆ.



ಬೆಳಿಗ್ಗೆ 09 ಗಂಟೆಗೆ ಪದಗ್ರಹಣ ನಡೆಯಲಿದ್ದು, ಬಳಿಕ ಮಧ್ಯಾಹ್ನ 12.00 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ನಡುಬೊಟ್ಟು ಶ್ರೀ ಉದ್ಭವ ರೌದ್ರನಾಥೇಶ್ವರ ದೇವಸ್ಥಾನದ ಧಮ೯ದಶಿ೯ ಡಾ. ರವಿ.ಎನ್ ದೀಪ ಪ್ರಜ್ವಲಿಸಿ ಈ ಕಾರ್ಯಕ್ರಮ ಉದ್ಘಾಟಿಸಲಿದ್ದು ಮುಳಿಯ ಶ್ರೀ ವೈಷ್ಣವಿ ಕ್ಷೇತ್ರದ ಶ್ರೀ ಶ್ರೀ ಶಿವಾನಂದ ಸರಸ್ವತೀ ಸ್ವಾಮೀಜಿ ದಿವ್ಯ ಉಪಸ್ಥಿತಿವಹಿಸಲಿದ್ದಾರೆ. ಶ್ರೀ ಧಾಮ ಮಾಣಿಲ, ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀಶ್ರೀಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮೈಸೂರು ಸಂಸ್ಥಾನದ ಮಹಾರಾಜರಾದ ಶ್ರೀ ಯಧುವೀರ್ ಒಡೆಯರ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಮಂಗಳಾದೇವಿ ದೇವಸ್ಥಾನದ ಬಳಿ 15 ಕೋಟಿ ರೂ.ಗಿಂತ ಅಧಿಕ ವೆಚ್ಚದಲ್ಲಿ ತಲೆ ಎತ್ತಿ ನಿಂತ ಕುಲಾಲ ಭವನದ ರೂವಾರಿ, ಕುಲಾಲ ಸಮಾಜದ ಮಹಾದಾನಿ. ಅಸಕ್ತ ಕುಲಾಲ ಬಂಧುಗಳು ಆಶಾಕಿರಣ. ವಿದ್ಯೆ, ಮದುವೆ, ಮನೆ, ಉದ್ಯಮ, ಸಮುದಾಯ ಭವನ ನಿರ್ಮಾಣ ಮಾಡುವಲ್ಲಿ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಕುಲಾಲ ಸಮಾಜದ ಬಂಧುಗಳ ಜ್ಯೋತಿಕಿರಣವಾಗಿರುವ ಶ್ರೀ ಸುನಿಲ್ ಆರ್. ಸಾಲ್ಯಾನ್ ಮುಂಬೈ ಅವರಿಗೆ ಅತಿಥಿ ಗಣ್ಯರ ಸಮ್ಮುಖದಲ್ಲಿ “ಸೇವಾ ಸಿಂಧೂರ” ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.


ಶ್ರೀ ಸುನಿಲ್ ಆರ್. ಸಾಲ್ಯಾನ್ ಮುಂಬೈ ಅವರ ಕಿರು ಪರಿಚಯ

ಸುನಿಲ್ ರಾಜು ಸಾಲ್ಯಾನ್ ಅವರು ಮುಂಬೈಯ ಉದ್ದಿಮೆಯಲ್ಲಿ ಕುಲಾಲರಿಗೆ ಹಾಗೂ ಸಮುದಾಯಕ್ಕೆ ನೀಡಿರುವ ಸೇವೆ ಅನನ್ಯ. ಕುಲಾಲ ಸಮುದಾಯದಲ್ಲಿರುವ ಅದೆಷ್ಟೋ ಯುವ ಉದ್ಯಮಿಗಳಿಗೆ ಸ್ಪೂರ್ತಿ. ಇವರು ತಮ್ಮ ತಾಯಿಯ ಹೆಸರಿನಲ್ಲಿ ಅನಾಥಶ್ರಮಗಳಿಗೆ ಸದಾ ನಿರಂತರವಾಗಿ ಕೊಡುಗೆಗಳನ್ನು ನೀಡುತ್ತಾ ಪ್ರತಿ ವರ್ಷ ತನ್ನ ಹುಟ್ಟು ಹಬ್ಬವನ್ನು ಬಡವರ ಮತ್ತು ಮಕ್ಕಳೊಂದಿಗೆ ಆಚರಿಸುತ್ತಾ ಬಂದಿದ್ದಾರೆ. ಈಗಾಗಲೇ ಹಲವಾರು ಸಂಘ ಸಂಸ್ಥೆಗಳಿಗೆ ದೊಡ್ಡ ಮಟ್ಟದ ಕೊಡುಗೆ ಗಳನ್ನು ನೀಡಿ ಕುಲಾಲ ಸಮುದಾಯದ ಕಣ್ಮಣಿಯಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.
ಕುಲಾಲ ಸಂಘ ಮುಂಬೈ ಇದರ ಮಂಗಳಾದೇವಿ ದೇವಸ್ಥಾನದ ಬಳಿ 15 ಕೋಟಿ ರೂ.ಗಿಂತ ಅಧಿಕ ವೆಚ್ಚದಲ್ಲಿ ತಲೆ ಎತ್ತಿ ನಿಂತ ಕುಲಾಲ ಭವನಕ್ಕೆ ವೈಯಕ್ತಿಕವಾಗಿ ಒಂದು ಕೋಟಿ ಗಿಂತಲೂ ಅಧಿಕ ಮೊತ್ತವನ್ನು ನೀಡಿದಂತಹ ಮಹಾದಾನಿ.
ಅದೇ ರೀತಿ ಶ್ರೀ ವೀರನಾರಾಯಣ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವಕ್ಕೆ ನೀಡಿದ ದೇಣಿಗೆ ಕೂಡ ಅಪಾರ. ಹೀಗೆ ಸದಾ ಸಮಾಜದ ಹಾಗೂ ಬಡವರ ಪಾಲಿಗೆ ನಿರಂತರ ಕೊಡುಗೆಗಳನ್ನು ನೀಡುತ್ತಾ ಬಂದಿರುವ ಸುನಿಲ್ ಸಾಲ್ಯಾನ್ ಇವರು ಈ ಬಾರಿಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಯ ಒಕ್ಕೂಟದ ಕುಂಭ ಕಲಾವಳಿ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ದಲ್ಲಿ “ಸೇವಾ ಸಿಂಧೂರ” ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಿದೆ.

