
Read Time:1 Minute, 11 Second
ಮಂಜೇಶ್ವರ: ಕುಂಜತ್ತೂರು ತೂಮಿನಾಡು ಶ್ರೀ ಮಹಾಕಾಳಿ ರಸ್ತೆ ಪರಿಸರದಲ್ಲಿರುವ ಕಾಸರಗೋಡು ಜಿಲ್ಲಾ ಕುಲಾಲ ಸಂಘದ
ಜಿಲ್ಲಾ ಕುಲಾಲ ಸಮುದಾಯ ಭವನದ ನೆಲಮಹಡಿಯಲ್ಲಿ ಜಿಲ್ಲಾ ಕುಲಾಲಸಂಘದ ಪ್ರಧಾನ ಕಚೇರಿಯ. ಉದ್ಭಾಟನಾ ಸಮಾರಂಭವು ಮೇ
26ರಂದು ಜರಗಲಿದೆ.



ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ರವೀಂದ್ರ ಮುನ್ನಿಪ್ಪಾಡಿ ಅಧ್ಯಕ್ಷತೆ ವಹಿಸುವರು. ಪುರುಷೋತ್ತಮ ಕುಲಾಲ್ ಕಲ್ಬಾವಿ ದೀಪ ಬೆಳಗಿಸುವರು. ಕಾರ್ಯಕ್ರಮದಲ್ಲಿ ಉದ್ಯಮಿ ಕಲ್ಬಾವಿ ಕುಲಾಲ್ ಮಂಗಳೂರು, ಪುಂಡರೀಕಾಕ್ಷ ಕೈರಂಗಳ, ನರಸಿಂಹ ಕುಲಾಲ್ ಕಡಂಬಾರು, ಹರೀಶ್ ಬಂಗೇರ, ಲೀಲಾವತಿ ಶಲಪಾಡಿ ಭಾಗವಹಿಸಿ ಶುಭಕೋರುವರು.
ಬೆಳಗ್ಗೆ 9.30ರಿಂದ ಶ್ರೀ ನಾಗಮೂಲ ಭಜನಾ ಮಂಡಳಿ ಅಡ್ಕ ಇವರಿಂದ ಭಜನಾ ಕಾರ್ಯಕ್ರಮ ನಂತರ ಮಂಜೇಶ್ವರ ಪಂಚಾಯತ್ ಶಾಖೆಯ ವಾರ್ಷಿಕ ಮಹಾಸಭೆ. ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮ ಜರಗಲಿದೆ ಎಂದು ಜಿಲ್ಲಾ ಕುಲಾಲ ಸಂಘದ ಪ್ರಕಟಣೆಯಲ್ಲಿತಿಳಿಸಲಾಗಿದೆ.

