ಕುಂದಾಪುರ: ಕುಲಾಲ ಕ್ರೀಡೋತ್ಸವ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲ. ಅನಿಲ್‌ದಾಸ್ ರವರಿಗೆ ಸನ್ಮಾನ ಕಾರ್ಯಕ್ರಮ

1 0
Read Time:2 Minute, 44 Second

ಕುಂದಾಪುರ: ಕುಲಾಲ ಸಮಾಜ ಸುಧಾರಕ ಸಂಘ (ರಿ.) ಕುಂದಾಪುರ ಮತ್ತು ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ) ಮಂಗಳೂರು ಇದರ ಕುಂದಾಪುರ & ಬೈಂದೂರು ವಿಧಾನಸಭಾ ಘಟಕಗಳ ನೇತೃತ್ವದಲ್ಲಿ ದ್ಕಲ್ ಕಟ್ಟೆ ಕಾಲೇಜು ಮೈದಾನದಲ್ಲಿ ಅದ್ದೂರಿ ಕುಲಾಲ ಕ್ರೀಡೋತ್ಸವ ದಿನಾಂಕ 14-12-2025 ರಂದು ನಡೆಯಿತು .

ಕ್ರೀಡೋತ್ಸವದ ಉದ್ಘಾಟನೆಯನ್ನು ಜಯರತ್ನ ಟ್ರಸ್ಟ್ ಪ್ರವರ್ತಕರು ಹಾಗೂ ಕುಂದಾಪುರ ಕಾಂಗ್ರೆಸ್ ಮುಖಂಡರಾದ ಶ್ರೀ ದಿನೇಶ್ ಹೆಗ್ಡೆಯವರು ನೆರವೇರಿಸಿದರು .

ಸಭೆಯ ಅಧ್ಯಕ್ಷತೆಯನ್ನು ರಾಘವೇಂದ್ರ ಕುಲಾಲ ಹೆಮ್ಮಾಡಿ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾರಾಜೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ ಅನಿಲ್ ದಾಸ್ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಮತ್ತು ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ತಸ್ಮಯ್ ಆರ್‌ ಕುಲಾಲ್ ( ಕಬ್ಬಡಿ ರಾಷ್ಟ್ರಮಟ್ಟ) , ಪ್ರೀತಮ್ ಕುಲಾಲ್ ( ಕರಾಟೆ ಜಿಲ್ಲಾ ಮಟ್ಟ ) ಇವರನ್ನು ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಜ. 4, 2026ರಂದು ಮಂಗಳೂರಿನ ಕುದ್ಮುಲ್ ರಂಗರಾವ್, ಪುರಭವನದಲ್ಲಿ ನಡೆಯಲಿರುವ ಕುಂಭ ಕಲಾವಳಿ ಕುಲಾಲ ಕಲಾ ಸೇವಾಂಜಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಅನಾವರಣ ಮಾಡಲಾಯಿತು.

ಸಭೆಯಲ್ಲಿ ಮೊಳಹಳ್ಳಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಶೆಟ್ಟಿ ದ್ಯಾವಲಬೆಟ್ಟು , ಪ್ರಭಾಕರ್ ಕುಲಾಲ ಜನ್ಸಾಲೆ , ರವಿ ಕುಲಾಲ , ಬಾಲಾಜಿ ಮೆಟಲ್ ಟೆಕ್ ಬೆಂಗಳೂರು . ಸತೀಶ್ ಕುಲಾಲ ನಡೂರು , ಮಂಜುನಾಥ ಕುಲಾಲ ಜನ್ಸಾಲೆ , ರಮೇಶ ಕುಲಾಲ ಕಾವ್ರಡಿ , ಶಂಕರ ಕುಲಾಲ ಮೊಳಹಳ್ಳಿ, ಕೃಷ್ಣ ಕುಲಾಲ ನಡೂರು , ಹರೀಶ್ ಕುಲಾಲ ಕಟ್ಟೇರಿ , ಸುರೇಶ್ ಕುಲಾಲ ಮೆಟ್ಟಿನಹೊಳೆ , ಅನಿತಾ ಅಶೋಕ ಕುಲಾಲ ನೂಜಿ , ದಿವ್ಯಾಸುರೇಶ್ ಕುಲಾಲ್ , ದಿನೇಶ್ ಕುಲಾಲ ಕೆದೂರು ಮತ್ತು ಸಮುದಾಯದ ಪ್ರಮುಖರಾದ ವಿಠಲ ಕುಲಾಲ ನೂಜಿ , ದಿನೇಶ್ ಕುಲಾಲ, ಸುರೇಶ್ ಕುಲಾಲ ವಕ್ವಾಡಿ , ಸುದಾಕರ್ ಕುಲಾಲ ಶಂಕರನಾರಾಯಣ , ಹರೀಶ್ ಹೊಂಬಾಡಿ, ಮಂಜುನಾಥ ಕುಲಾಲ ಮತ್ತು ಇತರರು ಉಪಸ್ಥಿತರಿದ್ದರು.

ರಾಜು ಕುಲಾಲ ನೂಜಿ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ರೇಖಾ ಪ್ರಭಾಕರ್ ಕುಲಾಲ ನಿರೂಪಿಸಿದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *