
ಬಂಟ್ವಾಳ : ಲಕ್ಷ್ಮೀ ಚಂಚಲೆ, ಯಾವಗಲೂ ಒಬ್ಬರ ಬಳಿ ಇರುವುದಿಲ್ಲ ಆದರೆ ಶಾರದೆ ಹಾಗಲ್ಲ. ಅವಳನ್ನು ಒಲಿಸಲು ತುಂಬಾ ಪ್ರಯತ್ನ ಮಾಡಬೇಕು. ಆದರೆ ಒಮ್ಮೆ ಒಲಿದರೆ ಮತ್ತೆ ಶಾಶ್ವತವಾಗಿ ನಮ್ಮ ಬಳಿಯೇ ಇರುತ್ತಾಳೆ. ಯಾವುದೇ ಕಲೆಯನ್ನು ಒಮ್ಮೆ ಪ್ರಯತ್ನ ಪಟ್ಟು ಅಭ್ಯಾಸ ಮಾಡಿದರೆ ಮತ್ತೆ ಅವರನ್ನು ಬಿಟ್ಡು ಹೋಗುವುದಿಲ್ಲ ಎಂದು ನೃತ್ಯ ನಿರ್ದೇಶಕ ಮಹೇಶ್ ಕುಲಾಲ್ ಕಡೇಶಿವಾಲಯ ತಿಳಿಸಿದ್ದಾರೆ.
ಅವರು ಬಿ.ಸಿ.ರೋಡಿನ ಪೊಸಳ್ಳಿ ಕುಲಾಲ ಭವನದಲ್ಲಿ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿರುವ ಕುಲಾಲ ಸೇವಾದಳದ ವತಿಯಿಂದ ನಡೆದ ಚೈತನ್ಯ 3.0 ರ ಪುನರಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಳಪತಿ ಗಣೇಶ್ ಕುಲಾಲ್ ಬೆದ್ರಗುಡ್ಡೆ ಮಾತನಾಡಿ ಎಲ್ಲರ ಸಹಕಾರದಿಂದ ಚೈತನ್ಯ ನಿರಂತರ ಕಾರ್ಯಾಗಾರ ನಡೆಯುತ್ತಿದೆ. ಇನ್ನಷ್ಡು ಕುಲಾಲ ಬಾಂಧವರಿಗೆ ಇದರ ಪ್ರಯೋಜನ ಸಿಗುವಂತಾಗಲಿ ಎಂದು ತಿಳಿಸಿದರು.
ಮಾಜಿ ಕುಲಾಲ ಸೇವಾದಳದ ದಳಪತಿ ಸಂದೀಪ್ ಸಾಲ್ಯಾನ್ ಮಾತನಾಡಿ ಕುಲಾಲ ಸಮಾಜ ಬಾಂದವರಿಗೆ ನಾಯಕರಾಗಲು ಕುಲಾಲ ಸೇವಾದಳದಲ್ಲಿ ಉತ್ತಮ ಅವಕಾಶ ಇದೆ. ಅಷ್ಟೇ ಅಲ್ಲದೇ ಕಳೆದ ಎರಡು ವರ್ಷದಿಂದ ಕುಲಾಲ ಬಾಂಧವರಿಗೆ ನಡೆಯುತ್ತಿರುವ ಉಚಿತ ನಿರಂತರ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂದಿದ್ದು ಮುಂದೆಯೂ ಒಳ್ಳೆಯ ತರಬೇತಿ ನಿರಂತರವಾಗಿ ನೀಡುವಂತಾಗಲಿ ಎಂದು ಹಾರೈಸಿದರು.
ಪ್ರೇಮನಾಥ ಕುಲಾಲ್ ನೇರಂಬೋಳುರವರು ಕೊಳಲು ನುಡಿಸುವ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಕುಲಾಲ ಸಮಾಜದ ಹಿರಿಯರಾದ ಜಯ ಭಂಡಾರಿಬೆಟ್ಟು, ನ್ಯಾಯವಾದಿ ಯಶೋಧ ಎಸ್. ಉಪಸ್ಥಿತರಿದ್ದರು. ಸೇವಾದಳದ ಸದಸ್ಯರುಗಳಾದ ತಾರನಾಥ ಮೊಡಂಕಾಪು, ದೇವದಾಸ ಅಗ್ರಬೈಲು, ಜಯಂತ ಅಗ್ರಬೈಲು, ಜಯಾನಂದ ಸಜೀಪ, ರಾಘವೇಂದ್ರ ಕಾಮಾಜೆ, ಯಾದವ ಅಗ್ರಬೈಲು, ರಾಜೇಶ್ ಭಂಡಾರಿಬೆಟ್ಟು ಕಾರ್ಯಕ್ರಮಕ್ಕೆ ಸಹಕರಿಸಿದ್ದರು.
ಕಾರ್ಯದರ್ಶಿ ಚಂದ್ರಶೇಖರ ದೈಪಲ ಸ್ವಾಗತಿಸಿದರು. ಕು. ಮಿಥ್ವಿ, ಕು. ಧನ್ಯಾ, ಕು. ವೈಷ್ಣವಿ, ಕು. ಶ್ರಾವಣಿ, ಮಾ. ನಮನ್ ಕುಲಾಲ್, ಮಾ. ಗಗನ್ ಜೆ.ಸಿ., ಕು. ಹರ್ಷಿತಾ ಜೆ. ಪ್ರಾರ್ಥನೆ ಮಾಡಿದರು. ಕೃತಿಕ್ ಕುಮಾರ್ ವೈ.ಎಸ್. ದನ್ಯವಾದ ನೀಡಿದರು.

