
Read Time:1 Minute, 11 Second
ವಾಮದಪದವು: ಕುಲಾಲ ಸಂಘ ವಾಮದಪದವು ಇದರ ವಾರ್ಷಿಕ ಮಹಾಸಭೆಯು ಪದವು ದುರ್ಗಾಪರಮೇಶ್ವರಿ ಸಭಾಂಗಣದಲ್ಲಿ ಲಯನ್ ಅನಿಲ್ ದಾಸ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.




ಕಾರ್ಯಕ್ರಮವನ್ನು ಉದ್ಭವ ರುದ್ರನಾಥೇಶ್ವರ ಕ್ಷೇತ್ರದ ಶ್ರೀ ರವಿ ನಡುಬೊಟ್ಟು ದೀಪ ಬೆಳಗಿಸಿ ಉದ್ಘಾಟಿಸಿದರು .
ಸಂಘದ ಅಧ್ಯಕ್ಷರಾದ ಸುರೇಶ್ ಕುಲಾಲ ಮತ್ತು ಮುಖ್ಯ ಆಥಿತಿಗಳಾಗಿ ಗಿರೀಶ್ ಕುಂಭಶ್ರೀ, ಈಶ್ವರ್ ಕಣ್ವ ತೀರ್ಥ, ಪ್ರಿಯಾ ಸತೀಶ್, ಸೋಮಯ್ಯ ಅನೈನಾಡೆ, ರಾಧ ಕೃಷ್ಣ ಬಂಟ್ವಾಳ, ಬಂಟ್ವಾಳ ಅಧ್ಯಕ್ಷ ರಾದ ರಮೇಶ್ ಸಂಚಯ ಗಿರಿ, ಸುರೇಶ್ ನಾವೂರ್, ಪ್ರವೀಣ್ ಬಸ್ತಿ, ಪ್ರದೀಪ್ ಅತ್ತಾವರ ಮುಂತಾದವರು ಉಪಸ್ಥಿತರಿದ್ದರು.



ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಾದ ಲಯನ್ ಅನಿಲ್ ದಾಸ್ ಹಾಗೂ ಜಿಲ್ಲಾ ಸಂಘ ಅಧ್ಯಕ್ಷರನ್ನು ಸನ್ಮಾನಿಸಲಾಯಿತು ಮತ್ತುವಿವಿಧ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.



