ಕುಲಾಲ ಪ್ರತಿಷ್ಠಾನದಿಂದ ನಡೆಯುವ ಕುಲಾಲ ಪರ್ಬ ಕ್ಕೆ ಶುಭಾಶಯ ಕೋರಿದ ಲಯನ್ ಅನಿಲ್ ದಾಸ್

0 0
Read Time:3 Minute, 10 Second

ಮಂಗಳೂರು :ಕುಲಾಲ ಪ್ರತಿಷ್ಠಾನ ಮಂಗಳೂರು ವತಿಯಿಂದ ‘ಕುಲಾಲ ಪರ್ಬ’ ಕಾರ್ಯಕ್ರಮ ಇಂದು (ಎ.13) ರಂದು ಮಧ್ಯಾಹ್ನ 2 ಗಂಟೆಯಿಂದ ಉರ್ವಸ್ಟೋರ್‌ ಬಳಿಯ ಅಂಬೇಡ್ಕರ್‌ ಭವನದ ಶ್ರೀಮತಿ ಸುಮಿತ್ರ ರಾಜು ಸಾಲಿನ್ ವೇದಿಕೆಯಲ್ಲಿ ನಡೆಯಲಿದೆ.

ಈ ಕಾರ್ಯಕ್ರಮ ಉತ್ತಮವಾಗಿ ನಡೆಯಲಿ ಎಂದು ಲಯನ್ ಅನಿಲ್ ದಾಸ್ ಶುಭಾಶಯ ವ್ಯಕ್ತಪಡಿಸಿದರು.

ಇಂದು ಮಧ್ಯಾಹ್ನ 2 ಗಂಟೆಗೆ ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳು
ಉದ್ಘಾಟಿಸಲಿದ್ದಾರೆ. ಕುಲಾಲ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್‌ ಕುಲಾಲ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಆತಿಥಿಗಳಾಗಿ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನ ಪ್ರಧಾನ ಅರ್ಚಕ ಶಿವಾನಂದ ಕನಡ, ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಮಾಜಿ ಅಧ್ಯಕ್ಷ ಎಂ.ಪಿ. ಬಂಗೇರ, ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಮಮತಾ ಅಣ್ಣಯ್ಯ ಕುಲಾಲ್‌, ಓಲ್ಡ್‌ ಕೆಂಟ್‌ ರಸ್ತೆ ಶ್ರೀ ದೇವಿ ದೇವಸ್ಥಾನ ಅಧ್ಯಕ್ಷ ಸದಾಶಿವ ಕುಲಾಲ್‌ ಅತ್ತಾವರ, ನ್ಯಾಯವಾದಿ ರಾಮ್‌ಪ್ರಸಾದ್‌ ಎಸ್‌., ಕುಲಾಲ ಕುಂಬಾರರ ಯುವ ವೇದಿಕೆ ರಾಜ್ಯಾಧ್ಯಕ್ಷ ಗಂಗಾಧರ ಬಂಜನ್‌, ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ, ಸ್ವರ್ಣಕುಂಭ ವಿ.ಸಹಕಾರಿ ಸಂಘದ ಅಧ್ಯಕ್ಷ ನಾಗೇಶ್‌ ಕುಲಾಲ್‌, ಕುಂಭ ನಿಧಿ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ ಕಾರ್ಯಾಧ್ಯಕ್ಷ ಕುಶ ಆರ್‌. ಮೂಲ್ಯ, ಶ್ರೀ ವೀರನಾರಾಯಣ
ಸೇವಾ ಸಮಿತಿ ಅಧ್ಯಕ ಕಿರಣ್‌ ಅಟ್ಲೂರು ಭಾಗವಹಿಸಲಿದ್ದಾರೆ.

ಮಧ್ಯಾಹ್ನ 2.30 ರಿಂದ ನೃತ್ಯ ಸಂಗೀತ ಸಮ್ಮಾನ ನಡೆಯಲಿದೆ. ಕುಲಾಲ ಸಮುದಾಯದ 25 ಸಾಧಕರಿಗೆ ‘ಕುಲಾಲ ಸಾಧಕ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಸಂಜೆ 6.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ರೇಕಿ ಗುರು
ವಿಜಯ ಸುವರ್ಣ ಮಾದುಕೋಡಿ ಉಪಸ್ಥಿತಿ ಇರಲಿದೆ. ಸುನಿಲ್‌ ಸಾಲ್ಯಾನ್‌ ಮತ್ತು ದೇವಕಿ ಸಾಲ್ಯಾನ್‌ ಅವರಿಗೆ ಗೌರವ ಅಭಿನಂದನೆ ನಡೆಯಲಿದೆ. ಕುಲಾಲ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್‌ ಕುಲಾಲ್‌ ಮಂಗಳಾದೇವಿ ಅಧ್ಯಕ್ಷತೆ ವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಪ್ರಮುಖರಾದ ಐಕಳ ಹರೀಶ್‌ ಶೆಟ್ಟಿ, ಸದಾಶಿವ ಶೆಟ್ಟಿಕನ್ಯಾನ, ಶಶಿಧರ ಶೆಟ್ಟಿಬರೋಡ, ಕರ್ನಿರೆ ವಿಶ್ವನಾಥ ಶೆಟ್ಟಿ, ವಿ. ಕರುಣಾಕರಣ್‌, ಮೋಹನ ಪೂಜಾರಿ, ಮಯೂರ್‌ ಉಳ್ಳಾಲ್‌
ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.

ರಾತ್ರಿ 8 ರಿಂದ 8.30 ರವರೆಗೆ ನಾಗೇಶ್‌ ಕುಳಾಯಿ ಸಾರಥ್ಯದಲ್ಲಿ ‘ಮಣ್ಣಾ ಬಾಜನ’ ಕಿರು ನಾಟಕ ಪ್ರದರ್ಶನಗೊಳ್ಳಲಿದೆ. 8.30 ರಿಂದ 9ರವರೆಗೆ ಸೀತಾರಾಮ ಕುಲಾಲ್‌ ಮತ್ತು ತಂಡದಿಂದ ‘ತಾಲೀಮು ಪ್ರದರ್ಶನ’ ಇರಲಿದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *