
ಮಂಗಳೂರು: ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಹಾಗೂ ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ ಮಂಗಳೂರು ಸಹಯೋಗದಲ್ಲಿ ಪದಗ್ರಹಣ, ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಆಶಕ್ತರಿಗೆ ನೆರವು ಸೇರಿದಂತೆ ವಿವಿಧ ವಿಭಿನ್ನ ಕಾರ್ಯಕ್ರಮ ‘ಕುಂಭ ಕಲಾವಳಿ’ ಕುಲಾಲ ಕಲಾ ಸೇವಾಂಜಲಿ ಜ. 4 ರಂದು ಕುದ್ಮುಲ್ ರಂಗರಾವ್ ಪುರಭವನ ಮಂಗಳೂರು ಜರುಗಲಿದೆ ಎಂದು ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಅಧ್ಯಕ್ಷರಾದ ಲಯನ್ ಅನಿಲ್ ದಾಸ್ ರವರು ಮಂಗಳೂರಿನ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.




ಬೆಳಿಗ್ಗೆ 8.30 ಕ್ಕೆ ಶ್ರೀ ಶಿವಾನಂದ ಸರಸ್ವತೀ ಸ್ವಾಮೀಜಿ ಶ್ರೀ ವೈಷ್ಣವಿ ಕ್ಷೇತ್ರ ಮುಳಿಯ ಇವರ ದಿವ್ಯ ಉಪಸ್ಥಿತಿಯಲ್ಲಿ ದೀಪ ಪ್ರಜ್ವಲನೆಯನ್ನು ಡಾ. ರವಿ ಎನ್. ಧರ್ಮದರ್ಶಿಗಳು, ಶ್ರೀ ಉದ್ಧವ ರೌದ್ರನಾಥೇಶ್ವರ ದೇವಸ್ಥಾನ, ನಡುಬೊಟ್ಟು ನೆರವೇರಿಸಲಿದ್ದಾರೆ.
ಬೆಳಿಗ್ಗೆ ಗಂಟೆ 9 ಕ್ಕೆ ನೂತನ ದ.ಕ. ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ನಡೆಯಲಿದೆ. ಬೆಳಿಗ್ಗೆ 9.30 ಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿಲಿದ್ದು, ಅಧ್ಯಕ್ಷತೆಯನ್ನು ಲ| ಅನಿಲ್‌ದಾಸ್ ವಹಿಸಲಿದ್ದಾರೆ.


ಮಧ್ಯಾಹ್ನ 12 ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯಧುವೀರ್ ಒಡೆಯರ್, ಮಹಾರಾಜರು ಮೈಸೂರು, ಕ್ಯಾಪ್ಟನ್ ಬ್ರಿಜೇಶ್ ಚೌಟ ಸಂಸದರು ಮಂಗಳೂರು, ಅತಿಥಿಗಳಾಗಿ ಶಿವಕುಮಾರ್ ಚೌಡ ಶೆಟ್ಟಿ, ರಾಷ್ಟ್ರೀಯ ಅಧ್ಯಕ್ಷರು ಅಖಿಲ ಭಾರತ ಕುಂಬಾರರ ಮಹಾಸಭಾ, ಡಾ| ಶ್ರೀನಿವಾಸ ವೇಲು, ಸೆನೆಟ್ ಸದಸ್ಯರು ರಾಜೀವಗಾಂಧಿ ವಿ.ವಿ ಬೆಂಗಳೂರು, ಶ್ರೀನಿವಾಸ್ ಸಂಸ್ಥಾಪಕರು ಕರ್ನಾಟಕ ರಾಜ್ಯ ಕುಂಬಾರ ನೌಕರರ ಸಂಘ ಬೆಂಗಳೂರು,ಡಾ| ಎಂ. ಅಣ್ಣಯ್ಯ ಕುಲಾಲ್ ಸ್ಥಾಪಕಾಧ್ಯಕ್ಷರು ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ,ಡಾ. ಎಸ್. ರಮ್ಯಾ ಸಹಾಯಕ ಆಯುಕ್ತರು ಕಮರ್ಷಿಯಲ್ ಟ್ಯಾಕ್ಸ್ ಬೆಂಗಳೂರು, ನಿತ್ಯಾಭರಣ ಚೌಡ ಶೆಟ್ಟಿ ರಾಜಾಧ್ಯಕ್ಷರು ಆ.ಭಾ.ಕುಂಬಾರರ ಮಹಾಸಭಾ ಬೆಂಗಳೂರು, ರಘು ಎ. ಮೂಲ್ಯ, ಅಧ್ಯಕ್ಷರು ಕುಲಾಲ ಸಂಘ ಮುಂಬೈ. ಕೆ.ಎ. ಲಕ್ಷ್ಮಣ ಕುಲಾಲ್ ಜನ್ಸಾಲೆ ಧರ್ಮದರ್ಶಿಗಳು, ದಿವಾಕರ್ ಮೂಲ್ಯ, ಅಧ್ಯಕ್ಷರು ಕುಲಾಲ ಸಂಘ ಬೆಂಗಳೂರು, ರಮೇಶ್ ಬಾಳೆಹಿತ್ತು ಮಾಲಕರು ಶಿಲ್ಪಾ ಪ್ರೊಡಕ್ಟ್, ಬೆಂಗಳೂರು, ಸೌಂದರ್ಯ ಮಂಜಪ್ಪ ಚೆಯರ್‌ಮೆನ್ ಸೌಂದರ್ಯ ವಿದ್ಯಾಸಂಸ್ಥೆ ಬೆಂಗಳೂರು, ಬಿ. ಪ್ರೇಮಾನಂದ ಕುಲಾಲ್ ಅಧ್ಯಕ್ಷರು ಶ್ರೀ ವೀರನಾರಾಯಣ ಸೇವಾ ಟ್ರಸ್ಟ್, ಸುಧಾಕರ್ ಸಾಲ್ಯಾನ್ ರಾಜ್ಯಾಧ್ಯಕ್ಷರು ಕ.ರಾ.ಕು.ಕುಂ.ಯು. ವೇದಿಕೆ, ಸುಕುಮಾರ್ ಬಂಟ್ವಾಳ ವಿಭಾಗೀಯ ಅಧ್ಯಕ್ಷರು ಕ.ರಾ.ಕು.ಕುಂ.ಯು. ವೇದಿಕೆ, ಶ್ರೀಮತಿ ಆಶಾಲತಾದಾಸ್ ಮ್ಯಾನೇಜಿಂಗ್ ಟ್ರಸ್ಟಿ,ಸಂಜೆ 5.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಯು.ಟಿ. ಖಾದರ್ ಸಭಾಪತಿಗಳು ವಿಧಾನಸಭೆ ಕರ್ನಾಟಕ, ವೇದವ್ಯಾಸ್ ಕಾಮತ್ ಶಾಸಕರು ಮಂಗಳೂರು ವೈ. ಭರತ್ ಶೆಟ್ಟಿ, ಶಾಸಕರು ಮಂಗಳೂರು ಉತ್ತರ, ಹರೀಶ್ ಪೂಂಜ ಶಾಸಕರು ಬೆಳ್ತಂಗಡಿ, ಯು. ರಾಜೇಶ್ ನಾಯ್ಕ ಉಳಿಪ್ಪಾಡಿಗುತ್ತು ಶಾಸಕರು, ಅಶೋಕ್ ಕುಮಾರ್ ರೈ ಶಾಸಕರು ಪುತ್ತೂರು, ಕಿಶೋರ್ ಕುಮಾರ್ ವಿಧಾನ ಪರಿಷತ್ ಸದಸ್ಯರು, ಸತೀಶ್ ಕುಂಪಲ ಅಧ್ಯಕ್ಷರು ಭಾರತೀಯ ಜನತಾ ಪಾರ್ಟಿ, ಸೌಂದರ್ಯ ರಮೇಶ್, ಉದ್ಯಮಿಗಳು, ಸಂತೋಷ್ ಕುಮಾರ್ ರೈ ಬೋಳಿಯಾರ್, ಸದಾಶಿವ ಉಳ್ಳಾಲ್, ಅಧ್ಯಕ್ಷರು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ, ಅರುಣ್ ಕುಮಾರ್ ಪುತ್ತಿಲ, ಪುತ್ತೂರು, ಯಜ್ಞೇಶ್ ಬರ್ಕೆ ಸ್ಥಾಪಕಾಧ್ಯಕ್ಷರು, ಬರ್ಕೆ ಫ್ರೆಂಡ್ಸ್,ಪದ್ಮರಾಜ್ ಆರ್. ಕೋಶಾಧಿಕಾರಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ರವಿ ಕುಲಾಲ್ ಮಾಲಕರು, ಬಾಲಾಜಿ ಇಂಡಸ್ಟ್ರೀಸ್, ದಯಾನಂದ ಅಡ್ಯಾರ್, ಅಧ್ಯಕ್ಷರು ದ.ಕ. ಜಿಲ್ಲಾ ಕೋಳಿ ಸಾಕಾಣೆದಾರರ ಸಂಘ, ಭಾಸ್ಕರಚಂದ್ರ ಶೆಟ್ಟಿ, ಗೌರವಾಧ್ಯಕ್ಷರು ಕೇಂದ್ರಿಯ ಮಂಡಳಿ, ಹಿಂದೂ ಯುವ ಸೇನೆ, ಶ್ರೀಮತಿ ಕಸ್ತೂರಿ ಪಂಜ ಮಾಜಿ ಉಪಾಧ್ಯಕ್ಷರು ಜಿಲ್ಲಾ ಪಂಚಾಯತ್, ಶ್ರೀಮತಿ ಭಾರತಿ ಸೇಸಪ್ಪ ರಾಜ್ಯ ಮಹಿಳಾ ಸಂಚಾಲಕಿ, ಕ.ರಾ.ಕು.ಕುಂ. ಯುವ ವೇದಿಕೆ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದಾರೆ.

“ಕುಲಾಲ ಸಿಂಧೂರ” ಪುರಸ್ಕಾರ ಪ್ರದಾನ:
ಸಮಾರಂಭದಲ್ಲಿ ಬಿ.ಎಸ್. ಕುಲಾಲ್ ಪುತ್ತೂರು ಇವರಿಗೆ ‘ಸಹಕಾರ ಸಿಂಧೂರ’ ಚಂದಪ್ಪ ಮೂಲ್ಯ ಉಪ್ಪಿನಂಗಡಿ ‘ಸೇನಾ ಸಿಂಧೂರ’ ಪುರುಷೋತ್ತಮ ಕುಲಾಲ್ ಕಲಾವಿ ‘ಧಾರ್ಮಿಕ ಸಿಂಧೂರ’ ಚಿದಂಬರ ಬೈಕಂಪಾಡಿ ‘ಮಾಧ್ಯಮ ಸಿಂಧೂರ’ ಗಿರೀಶ್ ಕೆ.ಹೆಚ್ ವೇಣೂರು ‘ಶಿಕ್ಷಣ ಸಿಂಧೂರ’, ಸೀತಾರಾಮ ಬಂಗೇರ ಕೊಲ್ಯ ‘ಧರ್ಮ ಸಿಂಧೂರ’, ಸುನಿಲ್ ಆರ್. ಸಾಲ್ಯಾನ್ ಮುಂಬೈ ‘ಸೇವಾ ಸಿಂಧೂರ’, ಡಾ| ಎಂ. ಅಣ್ಣಯ್ಯ ಕುಲಾಲ್ ಉಳ್ಳೂರು ‘ವೈದ್ಯ ಸಿಂಧೂರ’, ಶ್ರೀಮತಿ ಸಾವಿತ್ರಿ ಮಹಾಬಲಹಾಂಡ ‘ಮಾತೃ ಸಿಂಧೂರ’, ವಿಠಲ್ ಕುಲಾಲ್ ‘ಉದ್ಯಮ ಸಿಂಧೂರ’ ಪ್ರಶಸ್ತಿ ಪ್ರಧಾನ ಮಾಡಲಾಗುವುzಸೇವಾಂಜಲಿ:ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ ಮಂಗಳೂರು ಸಹಯೋಗದೊಂದಿಗೆ ಸೇವಾಂಜಲಿ ವಿವಿಧ ವಿಧಾನಸಭಾ ಫಲಾನುಭವಿಗಳಿಗೆ ಸಹಾಯಹಸ್ತ ಸಾಧಕರಿಗೆ ಸನ್ಮಾನ, ಶೈಕ್ಷಣಿಕ ಪ್ರೋತ್ಸಾಹ ಧನ, ವೈದ್ಯಕೀಯ ನೆರವು, ಅಶಕ್ತರಿಗೆ ಆರ್ಥಿಕ ಸಹಾಯ ಮೊದಲಾದ ಕಾರ್ಯಕ್ರಮಗಳು ನಡೆಯಲಿದೆ.
ಕಾರ್ಯಕ್ರಮದಲ್ಲಿ ಹೊರನಾಡ ಅತಿಥಿಗಳು, ಚಲನಚಿತ್ರ ಕಲಾವಿದರು, ನಟರು ವಿಶೇಷ ಆಕರ್ಷಣೆಯಾಗಲಿದ್ದಾರೆ.
ಲಯನ್ ಅನಿಲ್ ದಾಸ್ ಸ್ವಾಗತ ಮಾಡಿ ಪ್ರಸ್ತಾವಿಕ ವಾಗಿ ಮಾತಾಡಿದರು. ಸಂಸ್ಥಾಪಕ ಅಧ್ಯಕ್ಷರಾದ ಡಾ. ಅಣ್ಣಯ್ಯ ಕುಲಾಲ್, ವಿಭಾಗೀಯ ಅಧ್ಯಕ್ಷರಾದ ಸುಕುಮಾರ್ ಬಂಟ್ವಾಳ , ಕಾರ್ಯದರ್ಶಿ ನವೀನ್ ಕೆ ಮಜಲ್, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಜಯರಾಜ್ ಪ್ರಕಾಶ್ ಮತ್ತು ಜಯಂತ್ ಸಂಕೋಳಿಗೆ ಮುಂತಾದವರು ಉಪಸ್ಥಿತರಿದ್ದರು.

