
ಮಂಗಳೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ.) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮಂಗಳೂರು ಇದರ ನೂತನ ಜಿಲ್ಲಾ ಕಛೇರಿಯ ಉದ್ಘಾಟನಾ ಕಾರ್ಯಕ್ರಮವು ದಿನಾಂಕ ಅ.12 ರಂದು ರವಿವಾರ ಕಂಕನಾಡಿಯ ಎಂಪೊರಿಯಂ ಕಾಂಪ್ಲೆಕ್ಸ್ ನ 2ನೇ ಮಹಡಿಯಲ್ಲಿ ನಡೆಯಲಿದೆ.


ಮತ್ತು ದಾಸ್ ಚಾರಿಟಬಲ್ ಸೇವಾ ಟ್ರಸ್ಟ್ (ರಿ.) ಮಂಗಳೂರು, ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರವು ನಡೆಯಲಿದೆ.
ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಶ್ರೀ ಹರಿನಾರಾಯಣ ಆಸ್ರಣ್ಣ ಕಟೀಲು ಕ್ಷೇತ್ರ ಇವರು ನೆರವೇರಿಸಿಲಿದ್ದಾರೆ.
ಲ| ಅನಿಲ್ ದಾಸ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ನಾಮ ಪಲಕ ಅನಾವರಣ ಡಾ| ಎಂ ಅಣ್ಣಯ್ಯ ಕುಲಾಲ್ ಉಳ್ತೂರು, ಘನ ಉಪಸ್ಥಿತಿಯಲ್ಲಿ ಶ್ರೀ ಜಯರಾಜ್ ಪ್ರಕಾಶ್, ಶ್ರೀ ಪ್ರೆಮಾನಂದ ಕುಲಾಲ್ ಕೋಡಿಕಲ್, ಶ್ರೀಮತಿ ಸಾವಿತ್ರಿ ಮಹಾಬಲ ಹಾಂಡ, ಶ್ರೀ ಸುಧಾಕರ ಸಾಲ್ಯಾನ್, ಶ್ರೀ ಸುಕುಮಾರ್ ಬಂಟ್ವಾಳ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.


ಕುಲಾಲ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯವನ್ನು ಯಶಸ್ವಿಗೊಳಿಸುವಲ್ಲಿ ಸಹಕರಿಸಬೇಕಾಗಿ ಅಧ್ಯಕ್ಷರಾದ ಲ| ಅನಿಲ್ ದಾಸ್ ಮನವಿ ಮಾಡಿದ್ದಾರೆ.
