
ಶೃಂಗೇರಿ: ಕುಲಾಲ ಚಾವಡಿ ವಾಟ್ಸಪ್ ಬಳಗದಿಂದ “ಬದುಕಿಗೊಂದು ಬೊಗಸೆ ಅಕ್ಕಿ” ಅಭಿಯಾನವನ್ನು ಹಮ್ಮಿಕೊಂಡಿದ್ದು, ಶೃಂಗೇರಿ ತಾಲ್ಲೂಕಿನ ಕೋಟೆ ಆಸನಬಾಳು ಗ್ರಾಮದ ಗಿರಿಜಾ, ರುಕ್ಮಿಣಿ ಸಹೋದರಿಯರ ಮನೆಗೆ ತೆರಳಿ 30kg ಅಕ್ಕಿ ಮತ್ತು ಕುಕ್ಕರ್ ನೀಡಲಾಯಿತು.



ಸಂಪೂರ್ಣ ಶಿಥಿಲಗೊಂಡ ಮನೆ, ತುತ್ತು ಕೂಳಿಗೆ ನಿತ್ಯ ಪರಿಶ್ರಮವೇ ಆಧಾರವಾದ ಬದುಕು, ತ್ರಾಣವಿಲ್ಲದ ಕಾಯದಿಂದ ಎಷ್ಟು ಸಮಯದ ದುಡಿಮೆ ಸಾಧ್ಯ. ಈ ಬಗ್ಗೆ ವಿಚಾರಿಸಿದಾಗ ನಾಟಿ ಕೋಳಿ ಸಾಕಾಣಿಕೆ ಮಾಡುವುದಾಗಿ ತಿಳಿಸಿದರು.
ಕುಲಾಲ ಚಾವಡಿತಂಡವು ನಾಟಿ ಕೋಳಿ ಸಾಕಣೆ ಮಾಡಲು ಶೆಡ್ ನಿರ್ಮಿಸಿ ಕೊಡುವ ಭರವಸೆ ನೀಡಿದರು.
ಕುಲಾಲ ಚಾವಡಿಯ ಕಾರುಣ್ಯ ನಿಧಿಯಿಂದ 2000/- ದಿನೇಶ್ ಬಂಗೇರ ಇರ್ವತ್ತೂರು ಇವರು ನೀಡಿರುವ 2000/- ಮತ್ತು ಸ್ಥಳೀಯ ದಾನಿ ದಿನೇಶ್ ಕುಲಾಲ್ ಬೋಳೂರು ಇವರು ನೀಡಿರುವ 1000/- ಒಟ್ಟು ₹5000/- ದಿಂದ ₹ 2780/- (30kg ಅಕ್ಕಿ ಮತ್ತು ಕುಕ್ಕರ್) ನೀಡಿ ಮಿಕ್ಕುಳಿದ ₹ 2220/- ಚಾವಡಿಯ ಕಾರುಣ್ಯ ನಿಧಿ ಖಾತೆಯಲ್ಲಿ ಉಳಿಸಲಾಗಿದೆ. ಈ ಹಣಕ್ಕೆ ಹೆಚ್ಚಿನ ಮೊತ್ತವನ್ನು ಸೇರಿಸಿ ಕೋಳಿ ಶೆಡ್ ನಿರ್ಮಾಣ ಕಾರ್ಯಕ್ಕೆ ನೀಡುವುದೆಂದು ತೀರ್ಮಾನಿಸಲಾಯಿತು.
ಈ ಸಂರ್ಬದಲ್ಲಿ ಊರಿನ ಹಿರಿಯರಾದ ವೆಂಕಟೇಶ್ ಗೌಡ್ರು, ಚಾವಡಿ ಬಂಧು ಚಂದ್ರಣ್ಣ, ಸಮುದಾಯದ ಹಿತಚಿಂತಕ ನಾಗೇಂದ್ರ, ಸುಬ್ರಹ್ಮಣ್ಯ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಸೇವಾ ಪ್ರಮುಖ್ ಗೋಪಾಲಕೃಷ್ಣ ಹೊಸಕೊಪ್ಪ, ಸುಭೋದ ಶೃಂಗೇರಿ ಮತ್ತಿತರರು ಉಪಸ್ತಿತರಿದ್ದರು.

