ಆ. 10: ಕುದ್ಯಾಡಿ ಶಿವನಾಗ ಫ್ರೆಂಡ್ಸ್‌ ವತಿಯಿಂದ 2ನೇ ವರ್ಷದ ಕೆಸರ್‌ಡೊಂಜಿ ದಿನ – ಜಿಲ್ಲಾ ಮಟ್ಟದ ಪುರುಷರ ಹಗ್ಗಜಗ್ಗಾಟ

0 0
Read Time:2 Minute, 57 Second

ಬೆಳ್ತಂಗಡಿ: ಶಿವನಾಗ ಫ್ರೆಂಡ್ಸ್‌ ಕುದ್ಯಾಡಿ ಇವರ ಆಶ್ರಯದಲ್ಲಿ 2ನೇ ವರ್ಷದ ಕೆಸರ್‌ಡೊಂಜಿ ದಿನ ಮತ್ತು ಪುರುಷರ ಜಿಲ್ಲಾ ಮಟ್ಟದ ಹಗ್ಗಜಗ್ಗಾಟ ಕ್ರೀಡಾಕೂಟವು ಆ. 10ರಂದು ಬೆಳ್ತಂಗಡಿ ತಾಲೂಕಿನ ಅಳದಂಗಡಿ ಸನಿಹದ ಕುದ್ಯಾಡಿ ಶಿವನಾಗ ಬಳಿಯ ರತ್ನಾಕರ ಪೂಜಾರಿಯವರ ಗದ್ದೆಯಲ್ಲಿ ನಡೆಯಲಿದೆ.


ಬೆಳಿಗ್ಗೆ 9-30ಕ್ಕೆ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಲಿದ್ದಾರೆ. ಶಿವನಾಗ ಫ್ರೆಂಡ್ಸ್‌ ಇದರ ಅಧ್ಯಕ್ಷರಾಗಿರುವ ಸುಕೇಶ್‌ ಪೂಜಾರಿ ಇರಂತೊಟ್ಟು ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಅಳದಂಗಡಿ ಶ್ರೀ ಸತ್ಯದೇವತೆ ದೈವಸ್ಥಾನದ ಆಡಳತದಾರರಾದ ಶಿವಪ್ರಸಾದ ಅಜಿಲರು ಗೌರವ ಉಪಸ್ಥಿತಿ ಇರಲಿದ್ದಾರೆ. ಸಮಾರಂಭದ ಮುಖ್ಯ ಅತಿಥಿಗಳಾಗಿ ಧಾರ್ಮಿಕ ಮುಖಂಡ ಕಿರಣ್‌ಚಂದ್ರ ಡಿ. ಪುಷ್ಪಗಿರಿ ಉರುವಾಲು, ವೈದ್ಯ ಡಾ. ಎಂ.ಎನ್.‌ ತುಳುಪುಳೆ, ಉದ್ಯಮಿ ನಿತ್ಯಾನಂದ ಎನ್.‌ ನಾವರ, ಪಿಡಿಒ ಪ್ರಕಾಶ್‌ ಶೆಟ್ಟಿ ನೊಚ್ಚ, ಸುಲ್ಕೇರಿ ಗ್ರಾ.ಪಂ. ಅಧ್ಯಕ್ಷೆ ಗಿರಿಜಾ, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಸಂಪತ್‌ ಬಿ. ಸುವರ್ಣ, ಅಳದಂಗಡಿ ಸಿಎ ಬ್ಯಾಂಕ್‌ ಅಧ್ಯಕ್ಷ ರಾಕೇಶ್‌ ಹೆಗ್ಡೆ, ಉಪಾಧ್ಯಕ್ಷರಾದ ಜನಾರ್ಧನ ಪೂಜಾರಿ ಕೊಡಂಗೆ, ಸುಲ್ಕೇರಿ ಗ್ರಾ.ಪಂ. ಉಪಾಧ್ಯಕ್ಷ ಶುಭಕರ ಪೂಜಾರಿ, ಕುದ್ಯಾಡಿ ಸದ್ಧರ್ಮ ಯುವಕ ಮಂಡಲದ ಅಧ್ಯಕ್ಷ ಸದಾನಂದ ಬಿ., ರತ್ನಾಕರ ಪೂಜಾರಿ ಇರಂತೊಟ್ಟು, ಉದ್ಯಮಿ ವಿಶ್ವನಾಥ ಬಂಗೇರ, ಆನಂದ ಪಿಲ್ಯ, ನಾಟಿ ವೈದ್ಯ ಬೇಬಿ ಪೂಜಾರಿ ಅವರು ಪಾಲ್ಗೊಳ್ಳಲಿದ್ದಾರೆ.


ಸಂಜೆ 5 ಗಂಟೆಗೆ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ಕೆಪಿಸಿಸಿ ಪ್ರ. ಕಾರ್ಯದರ್ಶಿ ರಕ್ಷಿತ್‌ ಶಿವರಾಂ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕುದ್ಯಾಡಿ ಬ್ರಹ್ಮಶ್ರೀ ಬೈದರ್ಕಳ ಗರಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿಶ್ವನಾಥ ಪೂಜಾರಿ ಕುದ್ಯಾಡಿ, ಅಳದಂಗಡಿ ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ, ಗಣೇಶ್ ನಾರಾಯಣ ಪಂಡಿತ್‌, ರವಿ ಹಾರಡ್ಡೆ, ಸುಧೀರ್‌ ಕುಮಾರ್‌, ಜಯನಂದ ಪೂಜಾರಿ ಕೊರಲ್ಲ, ನವೀನ್‌ ಪಾದೆಮಾರಡ್ಕ, ಶೇಖರ ಪೂಜಾರಿ ಅಲೆಕ್ಕಿ, ಪ್ರಕಾಶ್‌ ಜಂತಿಗೋಳಿ, ನಾರಾಯಣ ಪೂಜಾರಿ ಹಾಗೂ ಎಸ್‌ಕೆಡಿಆರ್‌ಡಿಪಿ ಯೋಜನಾಧಿಕಾರಿ ಯಶವಂತ್‌ ಅವರು ಭಾಗವಹಿಸಲಿದ್ದಾರೆ. ಕೆಸರುಗದ್ದೆಯಲ್ಲಿ ಆಟವಾಡಲು ಸುಲ್ಕೇರಿ ಮತ್ತು ಅಳದಂಗಡಿ ವ್ಯಾಪ್ತಿಯ ಕ್ರೀಡಾತಂಡಗಳಿಗೆ ಮಾತ್ರ ಅವಕಾಶ ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *