
ಮಂಗಳೂರು : ಕುಡ್ಲ ಕುಲಾಲೆರ್ ಚಾರಿಟೇಬಲ್ ಸೇವಾ ಟ್ರಸ್ಟ್ ಮಂಗಳೂರು (ರಿ) ದ. ಕ. ಇದರ ಪ್ರಥಮ ಕಾರ್ಯಕಾರಿ ಸಮಿತಿ ಸಭೆ ಮಂಗಳೂರಿನ ಹೋಟೆಲ್ ವುಡ್ ಲ್ಯಾಂಡ್ ಸಭಾಭವನದಲ್ಲಿ ನಡೆಯಿತು.



ಸಭೆಯಲ್ಲಿ ಜಿಲ್ಲೆಯ ಕುಲಾಲ ಸಮುದಾಯದ ಯುವಕ, ಯುವತಿಯರಿಗೆ ಉದ್ಯೋಗ ಮಾಹಿತಿ ಶಿಬಿರ, ಉದ್ಯೋಗ ಆಧಾರಿತ ಶಿಕ್ಷಣ, ಲೋಕ ಸೇವಾ ಆಯೋಗದ ಪರೀಕ್ಷಾ ಸಿದ್ಧತೆ ಹಾಗೂ ತಾಂತ್ರಿಕ ನುರಿತ ಯುವಕರಿಗೆ ಪಾಶ್ಚಾತ್ಯ ದೇಶದಲ್ಲಿ ದೊರೆಯುವ ಉದ್ಯೋಗದ ಬಗ್ಗೆ ಮಾರ್ಗದರ್ಶನ ಮಾಡುವ ಉದ್ದೇಶದಿಂದ ಈ ಸಂಸ್ಥೆ ಸ್ಥಾಪನೆಯಾಗಿದೆ ಎಂದು ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷರಾಗಿ ಸದಾಶಿವ ಬಂಗೇರ ಮಾಜಿ ಅಧ್ಯಕ್ಷ ಬೂಡ ಬಂಟ್ವಾಳ, ಉಪಾಧ್ಯಕ್ಷರಾಗಿ ಮಂಜಪ್ಪ ಬಿಜೈ ನಿವೃತ್ತ ಎಂ. ಡಿ ಮೆಸ್ಕಾಂ, ಮಂಗಳೂರು ರಾಜೇಂದ್ರ ಕುಮಾರ್ ಮಾಜಿ ಉಪಮೇಯರ್ ಮಂಗಳೂರು ಮಹಾನಗರ ಪಾಲಿಕೆ, ಪ್ರಧಾನ ಕಾರ್ಯದರ್ಶಿ ಟಿ. ಸೇಸಪ್ಪ ಮಾಸ್ಟರ್ ನಿವೃತ್ತ ಮುಖ್ಯೋಪಾಧ್ಯಯರು, ಖಜಾಂಜಿಯಾಗಿ ವಿಶ್ವನಾಥ ಬಂಗೇರ ಕುಲಾಯಿ ನಿವೃತ್ತ ಆದಾಯ ತೆರಿಗೆ ಅಧಿಕಾರಿ ಮಂಗಳೂರು, ಟ್ರಸ್ಟಿಗಳಾಗಿ ಪೃಥ್ವಿರಾಜ್ ಆರ್ ಕೆ ಎಡಪದವು, ಸುಂದರ ಬಂಗೇರ ಆದ್ಯಪಾಡಿ,ಗಿರೀಶ್ ಎಂ ಪಿ ಕುತ್ತಾರ್ ಮಂಗಳೂರು, ಚಂದ್ರಹಾಸ ಪಲ್ಲಿಪಾಡಿ, ಭಾಸ್ಕರ ಎಂ ಪೆರುವಾಯಿ ಪುತ್ತೂರು, ದೇವಪ್ಪ ಕುಲಾಲ್ ಪಂಜಿಕಲ್ಲು, ರಮೇಶ್ ಬಾಳೆಹಿತ್ಲು ಬೆಂಗಳೂರು,ಉಮೇಶ್ ಕೆ, ಬೆಂಗಳೂರು, ದಯಾನಂದ ಬಂಟ್ವಾಳ,ಬಾಸ್ಕರ್ ಅಜೆಕಳ ಉಪಸ್ಥಿತರಿದ್ದರು.



ಸದಾಶಿವ ಬಂಗೇರ ಸ್ವಾಗತಿಸಿ, ವಂದಿಸಿದರು.

ಈ ಕಾರ್ಯಕ್ರಮಕ್ಕೆ ಕುಲಾಲ- ಕುಂಬಾರ ಯುವ ವೇದಿಕೆ ಜಿಲ್ಲಾ ಘಟಕ ಅಧ್ಯಕ್ಷರಾದ ಲ|ಅನಿಲ್ ದಾಸ್ ಮತ್ತು ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಶುಭ ಹಾರೈಸಿದರು.

