
ಮಂಗಳೂರು: ಸುಮಾರು ನಲವತ್ತು ವರುಷಗಳಿಂದ ಆರಾಧನೆ ಮಾಡಿಕೊಂಡು ಬಂದಿರುವ ಕೊರಗಜ್ಜನ ಕಾರ್ಣಿಕದ ಸಾನಿಧ್ಯ ನಂಬಿದ ಭಕ್ತರಿಗೆ ಸದಾ ಅಭಯ ನೀಡಿರುವ ಕೋರಗಜ್ಜನ ಕ್ಷೇತ್ರ ಅಂಬಿಕಾ ರೋಡ್ ಕೋರಗಜ್ಜ ಸೇವಾ ಸಮಿತಿಯ ವಾರ್ಷಿಕ ಮಹಾ ಸಭೆಯು ಅಂಬಿಕಾ ರೋಡ್ ಗಟ್ಟಿ ಸಮಾಜ ಭವನದ ಕೆಳ ಸಭಾಂಗಣ ದಲ್ಲಿ ನಡೆಯಿತು.


ಸಭಾ ಅಧ್ಯಕ್ಷತೆಯನ್ನು ಶ್ರೀ ಹರೀಶ್ ರಂಗೋಲಿ ( ಸ್ಥಾಪಕ ಅಧ್ಯಕ್ಷ ರು ) ವಹಿಸಿದ್ದರು. ಹಾಗೂ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೋಶಾಧಿಕಾರಿ ಮತ್ತು ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು.
ಸಭೆಯಲ್ಲಿ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಹಾಗೂ ವಿವಿಧ ವ್ಯವಸ್ಥೆಗಳ ಬಗ್ಗೆ ಗಹನ ವಾದ ಚರ್ಚೆಯನ್ನು ಮಾಡಲಾಯಿತು. ಹಾಗೂ 2025 / 2026 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಶ್ರೀ ಲಯನ್ ಅನಿಲ್ ದಾಸ್ ಇವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ದೀಕ್ಷಿತ್ ಕಾಪಿಕಾಡ್ ಕಾರ್ಯದರ್ಶಿಯಾಗಿ ಶ್ರೀ ಸಾಗರ್ ಕಾಪಿಕಾಡ್ ಕೋಶಾಧಿಕಾರಿಯಾಗಿ ಶ್ರೀಮತಿ ಗಾಯತ್ರಿ. ಶ್ರೀಮತಿ ದಿವ್ಯ ಗಣೇಶ್ ಗೌರವ ಸಲಹೆಗಾರರಾಗಿ ಶ್ರೀ ನವೀನ್ ಚಂದ್ರ ಕಾಪಿಕಾಡ್ ಶ್ರೀಮತಿ ಮೀರಾ ಕಾಪಿಕಾಡ್ ಶ್ರೀಮತಿ ಪವಿತ್ರ ಕಾಪಿಕಾಡ್ ಶ್ರೀಮತಿ ವಿಜಯ ಶ್ರೀಮತಿ ಲತಾ ಹರೀಶ್ ಗೌರವಧ್ಯಕ್ಷರುಗಳಾಗಿ ಶ್ರೀ ಪ್ರಶಾಂತ್ ಕಾಪಿಕಾಡ್ ಶ್ರೀ ಗಣೇಶ್ ಕಾಪಿಕಾಡ್ ಶ್ರೀ ಮೋಹನ್ ದಾಸ್
ಕಾಪಿಕಾಡ್ ಶ್ರೀ ದಾಮೋದರ್ ಶ್ರೀ ಬಾಲಕೃಷ್ಣ ಮೆಸ್ಕಾಂ. ಉಪಾಧ್ಯಕ್ಷರಾಗಿ ಶ್ರೀ ಸಂತೋಷ್ ಕುಮಾರ್ ಕಾಪಿಕಾಡ್ ಶ್ರೀಮತಿ ಉಷಾ ನಾಯಕ್ ಪ್ರಧಾನ ಸಂಘಟನಾ ಕಾರ್ಯದರ್ಶಿಗಳಾಗಿ ಶ್ರೀ ಸವಿತ್ ಉಚ್ಚಿಲ್ ಸಂಘಟನಾ ಕಾರ್ಯದರ್ಶಿ ಶ್ರೀ ನಿಕ್ಷಿತ್ ಕಾಪಿಕಾಡ್ ಸದಸ್ಯರಾಗಿ ಶ್ರೀ ವಿನೀತ್ ಶ್ರೀ ಮನ್ವಿತ್ ಶ್ರೀ ಸೌರವ್ ಕಾಪಿಕಾಡ್ ಪ್ರಧಾನ ಅರ್ಚಕರಾಗಿ ಶ್ರೀ ಚರಣ್ ಶ್ರೀ ದಾಮೋದರ ಶ್ರೀ ಲೋಕೇಶ್ ವಹಿಸಿದರು.

ಅಗೆಲು ಸೇವೆಯ ಪ್ರಮುಖರಾಗಿ ಶ್ರೀಮತಿ ಗೀತಾ ಶ್ರೀಮತಿ ಕುಸುಮ ಅವರನ್ನು ನೇಮಕ ಮಾಡಿದರು. ಸಭೆಯಲ್ಲಿ ಸದಸ್ಯರು ವಿವಿಧ ಸಲಹೆ ಸೂಚನೆ ಗಳನ್ನು ನೀಡಿದರು. ಕೊನೆಯದಾಗಿ ಶ್ರೀ ದೀಕ್ಷಿತ್ ಕಾಪಿಕಾಡ್ ವಂದನಾರ್ಪಣೆ ಗೈದರು..

