
ಕುಲಾಲ ಸಂಘ ಕೊಲ್ಯ ಇದರ 61 ವಾರ್ಷಿಕ ಮಹಾಸಭೆಯ ನಿಮಿತ್ತ ಸತ್ಯನಾರಾಯಣ ಪೂಜೆ ನೆರವೇರಿತು. ನಂತರ. ಶ್ರೀ ಸುನಿಲ್ ಸಾಲಿಯಾನ್ ಮುಂಬೈ ಇವರು ಕೊಡುಗೆ ನೀಡಿದ ಸಭಾ ಭವನದ ಮುಖ್ಯ ಬಾಗಿಲಿನ ದ್ವಾರ ದ ಉದ್ಘಾಟನೆ ಮಾಡಿದರು.




ಬಳಿಕ ವಾರ್ಷಿಕ ಮಹಾಸಭೆ ಶ್ರೀ ಭಾಸ್ಕರ್ ಕುತ್ತಾರ್ ಇವರ ಅಧ್ಯಕ್ಷತೆ ಯಲ್ಲಿ ಶ್ರೀಮತಿ ಸುಮಿತ್ರ ರಾಜು ಸಾಲಿಯಾನ್ ವೇದಿಕೆಯಲ್ಲಿ ನಡೆಯಿತು. ಪ್ರಧಾನ ಕಾರ್ಯದರ್ಶಿ ರಂಜಿತ್ ಉಚ್ಚಿಲ್ ವರದಿ ವಾಚಿಸಿದರು. ಕೋಶಾಧಿಕಾರಿ ಪ್ರಕಾಶ್ ಪಿಲಿಕೂರು ಲೆಕ್ಕ ಪತ್ರ ನೀಡಿದರು.
ಸಮಾರಂಭದಲ್ಲಿ ಕೊಡುಗೈ ದಾನಿ ಸುನಿಲ್ ಸಾಲಿಯನ್ ದಂಪತಿಗಳಿಗೆ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಯನ್ ಅನಿಲ್ ದಾಸ್ ದಂಪತಿಗಳಿಗೆ ಕೊಲ್ಯ ಕುಲಾಲ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು..
ಬಳಿಕ ಸಂಘ ದ ಮುಂದಿನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ನೂತನ ಸಮಿತಿ ಗೆ ಚುನಾವಣಾ ಪ್ರಕ್ರಿಯೆಯು ನಡೆಯಿತು. ಚುನಾವಣಾ ಅಧಿಕಾರಿಯಾಗಿ ದಯಾನಂದ. ಪಿ. ಎಸ್.. ನೇಮಕಗೊಂಡರು.


