
ಬದಿಯಡ್ಕ: ಬಿಜೆಪಿ ಕಾರ್ಯಕರ್ತನಾದ ರಂಜಿತ್ (30) ಮೇಲೆ ಚಾಕು ಇರಿದು ಗಾಯಗೊಳಿಸಿರುವ ಘಟನೆ ಬದಿಯಡ್ಕದಲ್ಲಿ ನಡೆದಿದೆ. ಮಧ್ಯಾಹ್ನದ ವೇಳೆಯಲ್ಲಿ ರಂಜಿತ್ ತಮ್ಮ ಬೈಕ್‌ನಲ್ಲಿ ತೆರಳುತ್ತಿದ್ದ ಸಮಯದಲ್ಲಿ ಹಳೆಯ ಪೊಲೀಸ್ ಕ್ವಾರ್ಟರ್ ಬಳಿ ಇಬ್ಬರು ತಡೆದು ನಿಲ್ಲಿಸಿದಾಳಿ ನಡೆಸಿದರೆಂದು ತಡೆಯಲು ಯತ್ನಿಸಿದಾಗ ರಂಜಿತ್ ಅವರ ಕೈಗೆ ಗಂಭೀರ ಗಾಯವಾಗಿದೆ. ಗಾಯಗೊಂಡ ರಂಜಿತ್ ನನ್ನು ಆಸ್ಪತ್ರೆಗೆ ಕರೆದೊಯ್ದು,ಚಿಕಿತ್ಸೆ ನೀಡಲಾಯಿತು.


ಈ ಘಟನೆಯ ಹಿಂದಿನ ಉದ್ದೇಶವೇನು ಎಂಬುದು ಸ್ಪಷ್ಟವಾಗದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯರು ಈ ದಾಳಿಯ ಹಿಂದೆ ಅನ್ಯಮತೀಯರ ಕೈವಾಡವಿದೆ ಎಂಬ ಅನುಮಾನವನ್ನು ವ್ಯಕ್ತಪಡಿಸುತ್ತಿದ್ದು, ಘಟನೆ ನಡೆದು ನಾಲ್ಕು ದಿನ ಆದರೂ ಪತ್ತೆ ಹಚ್ಚದ ಪೊಲೀಸ್ ನೀತಿ ಖಂಡನೀಯ ಎಂದು ಸ್ಥಳೀಯರ ಆಕ್ರೋಶಗೊಂಡಿದ್ದಾರೆ.ಈ ಘಟನೆ ಕುರಿತು ಶೀಘ್ರದಲ್ಲಿ ತನಿಖೆ ನಡೆಯಬೇಕೆಂದು ಒತ್ತಾಯಿಸುತ್ತಿದ್ದಾರೆ
ಹಿಂದೂ ಯುವಕನಿಗೆ ಚೂರಿ ಇರಿತ ಹಾಡು ಹಗಲು ಮಧ್ಯಾಹ್ನ ನಡೆದರು ಕೂಡ ಆರೋಪಿಗಳನ್ನು ಪತ್ತೆ ಹಚ್ಚದೆ ಇರುವುದು ಯಾವುದೋ ಹುನ್ನಾರದ ಭಾಗ ಎಂದು ಹಿಂದು ಕಾರ್ಯಕರ್ತರ ಆರೋಪ.


ಅನ್ಯಮತೀಯ ವ್ಯಕ್ತಿಗಳ ದಾಳಿ ಎಂದು ರಂಜಿತ್ ನಿಂದ ಆರೋಪ ಕೇಳಿ ಬರುತ್ತಿದೆ . ಅದೇ ರೀತಿಯಲ್ಲಿ ಚೂರಿ ಇರಿತ ಮಾಡಿದ ವ್ಯಕ್ತಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
