
Read Time:1 Minute, 20 Second
ಕುಲಾಲ ಸಂಘ (ರಿ.) ಕಾಪು ವಲಯ ಇವರ ಆಶ್ರಯದಲ್ಲಿ ಉಡುಪಿ ಹಾಗೂ ದ.ಕ ಜಿಲ್ಲಾ ಮಟ್ಟದ ಕುಲಾಲ ಸಮಾಜದ ಭಾಂಧವರಿಗಾಗಿ ವಾಲಿಬಾಲ್ ಹಾಗೂ ತ್ರೋಬಾಲ್ ಪಂದ್ಯಾಕೂಟವು ದಿನಾಂಕ ಡಿ.25ರಂದು ಉಚ್ಚಿಲ ಸರಸ್ವತಿ ಮಂದಿರ ಶಾಲಾ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು.




ಕಾಪು ಕುಲಾಲ ಸಂಘದವರು ನಡೆಸಿದಂತಹ ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಕುಲಾಲ/ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ.ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಹಿಳಾ ಮಣಿಗಳು ಪಡಕೊಂಡಿದ್ದಾರೆ .

.ಕಾರ್ಯಕ್ರಮದಲ್ಲಿ ಕಾಪು ಶಾಸಕರಾದ ಶ್ರೀ ಸುರೇಶ್ ಶೆಟ್ಟಿ ಗುರ್ಮೆ, ಕಾಪು ಕುಲಾಲ ಸಂಘ ವಲಯ ಅಧ್ಯಕ್ಷರಾದ ಹರೀಶ ಕುಲಾಲ ಬೆಳ್ಳಿಬೆಟ್ಟು, ಮುಖ್ಯ ಅಥಿಗಳಾಗಿ ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆಯ ಜಿಲ್ಲಾಧ್ಯಕ್ಷರಾದ ಲ| ಅನಿಲ್ ದಾಸ್, ಯಶ್ ಪಾಲ್ ಸುವರ್ಣ, ವಿನಯ್ ಕುಮಾರ್ ಸೊರಕೆ, ಮುನಿಯಾಲು ಉದಯಕುಮಾರ್ ಶೆಟ್ಟಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.



