
ಬೆಂಗಳೂರು: 2015ರಲ್ಲಿ ಅಖಿಲ ಕರ್ನಾಟಕ ವ್ಯಾಪ್ತಿಯ ಕುಂಬಾರ, ಕುಲಾಲ, ಗುನಗ ಹಾಂಡ, ಚಕ್ರಸಾಲಿ, ಕುಂಬಾರಸೆಟ್ಟಿ, ಪ್ರಜಾಪತಿ ಸಮುದಾಯದ ಎಂ.ಬಿ.ಬಿ.ಎಸ್., ಡೆಂಟಲ್, ಆಯುರ್ವೇದ, ಹೋಮಿಯೋಪತಿ, ಸಹಿತ ಎಲ್ಲಾ ಹಿರಿ-ಕಿರಿಯ ವೈದ್ಯರನ್ನು ಹಿರಿಯ ವೈದ್ಯರಾದ ತುಮಕೂರಿನ ಡಾ. ಅಂಪಣ್ಣ, ಕುಂದಾಪುರದ ಡಾ. ಎಂ.ವಿ. ಕುಲಾಲ್, ಬೆಂಗಳೂರಿನ ಡಾ. ಭಕ್ತ ವತ್ಸಲಂ, ಮೈಸೂರಿನ ಡಾ. ಬಿ.ಜಿ.ಸಾಗರ್ ಅವರ ಮಾರ್ಗದರ್ಶನದಲ್ಲಿ ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ಳೂರು, ಡಾ. ರಾಮಚಂದ್ರ ಬೆಂಗಳೂರು, ಡಾ. ಶ್ರೀನಿವಾಸನ್ ವೇಲು, ಬೆಂಗಳೂರು, ಡಾ. ಮಹೇಶ್ ಚಾಮರಾಜನಗರ, ಡಾ. ಸಾಂಬಶಿವ ಕೋಲಾರ, ಡಾ. ರಾಜಶೇಖರ್ ಬೆಂಗಳೂರು, ಡಾ. ರೂಪಶ್ರೀ ಬೆಂಗಳೂರು, ಡಾ. ಸಾಯಿ ಪ್ರಸಾದ್ ಬೆಂಗಳೂರು, ಡಾ. ರಾಜಣ್ಣ ಕೋಲಾರ, ಡಾ. ನಾಗರಾಜ್ ಮಾಲೂರು ಮುಂತಾದವರ ಸಂಚಾಲಕತ್ವದಲ್ಲಿ ಆರಂಭಿಸಿದ ಕುಂಭ ವೈದ್ಯಕೂಟಕ್ಕೆ ಈಗ ದಶಮಾನೋತ್ಸವದ ಸಂಭ್ರಮ.




ದಶಮಾನೋತ್ಸವ ಸಂಭ್ರಮದ ಕಾರ್ಯಕಾರಿ ಸಮಿತಿಗೆ ಅಧ್ಯಕ್ಷರಾಗಿ, ಹಿರಿಯ ಸಂಘಟಕರು, ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಉಪಾಧ್ಯಕ್ಷರಾದ ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ಳೂರು, ಕಾರ್ಯದರ್ಶಿಯಾಗಿ ಡಾ. ಮಹೇಶ್ ಚಾಮರಾಜನಗರ, ಹಣಕಾಸು ಕಾರ್ಯದರ್ಶಿಯಾಗಿ ಕ್ಯಾಪ್ಟನ್ ಡಾ. ರಾಜಶೇಖರ್, ಉಪಾಧ್ಯಕ್ಷರಾಗಿ ಡಾ. ರೂಪಶ್ರೀ ಮತ್ತು ಡಾ. ಗುರುನಿಂಗಪ್ಪ ಬಾಗಲಕೋಟೆ, ಸಂಘಟನಾ ಕಾರ್ಯದರ್ಶಿಗಳಾಗಿ, ಡಾ. ಪೂರ್ಣಿಮಾ ಬೆಂಗಳೂರು ಹಾಗೂ ಡಾ. ನಾಗರಾಜ್ ಮಾಲೂರು ಆಯ್ಕೆ ಆಗಿದ್ದು, ಹಿರಿಯ ಗೌರವ ಸಲಹೆಗಾರನ್ನಾಗಿ ಡಾ. ಎಂ.ವಿ. ಕುಲಾಲ್ ಕುಂದಾಪುರ, ಡಾ. ಬಿ.ಜಿ. ಸಾಗರ್ ಮೈಸೂರು, ಡಾ. ಭಕ್ತವತ್ಸಲಂ ಬೆಂಗಳೂರು ಇವರನ್ನು ಆರಿಸಿಕೊಳ್ಳಲಾಗಿದ್ದು, ಒಟ್ಟಿಗೆ ಸುಮಾರು 300ಕ್ಕೂ ಅಧಿಕ ಮಂದಿ ಸದಸ್ಯ ವೈದ್ಯರ ಗುಂಪಿನಿಂದ, ವಿಭಾಗವಾರು ಆದ್ಯತೆಯ ಮೇರೆಗೆ 28 ಮಂದಿಯನ್ನು ಕಾರ್ಯಕಾರಿ ಸಮಿತಿಗೆ ಆರಿಸಿಕೊಳ್ಳಲಾಯಿತು.

ಜನವರಿ 25ರಂದು ಬೆಂಗಳೂರಿನ ಕಬ್ಬನ್ ಪಾರ್ಕ್‌ನ ಟೆನ್ನಿಸ್ ಕ್ಲಬ್‌ನಲ್ಲಿ ಕಾರ್ಯಕಾರಿ ಸಮಿತಿಯನ್ನು ಕರೆಯಲಾಗಿದ್ದು, ಕುಂಬಾರ ಸಮಾಜಕ್ಕೆ ಅಗತ್ಯವಾದ ಶೈಕ್ಷಣಿಕ ಹಾಗೂ ಆರೋಗ್ಯ ಶಿಕ್ಷಣ ಸಂಬಂಧಿತ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವ ಬಗ್ಗೆ ಚರ್ಚಿಸಲಾಗುವುದು ಅಲ್ಲದೆ ಐದನೇ ಬಾರಿಯ ಕುಟುಂಬ ಸ್ನೇಹ ಮಿಲನ ಕಾರ್ಯಕ್ರಮಕ್ಕೆ ಸ್ಥಳ ಮತ್ತು ದಿನಾಂಕ ನಿಗದಿಮಾಡಲಾಗುವುದು ಎಂದು ಕಾರ್ಯಕಾರಿ ಸಮಿತಿ ತಿಳಿಸಿದೆ.


