
ಮಂಗಳೂರು: ದ.ಕ ಜಿಲ್ಲಾ ನಿವೃತ್ತಿ ಸೈನಿಕರ ಸಂಘದ ವತಿಯಿಂದ ಕಾರ್ಗಿಲ್ ವಿಜಯ ದಿವಸದ ರಜತ ಮಹೋತ್ಸವವನ್ನು ನಗರ ಕದ್ರಿ ಯುದ್ದ ಸ್ಮಾರಕದಲ್ಲಿ ಶುಕ್ರವಾರ ಆಚರಿಸಲಾಯಿತು.



ದೇಶಕ್ಕಾಗಿ ಮಡಿದ ವೀರಯೋಧರಿಗೆ ಹೂ- ಹಾರ ಅರ್ಪಿಸಿ, ಮೊಂಬತ್ತಿ ದೀಪ ಬೆಳಗಿಸಿ ನಮನ ಸಲ್ಲಿಸಲಾಯಿತು.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್ ಮಾತನಾಡಿ ದೇಶಕ್ಕಾಗಿ ಎದೆಯೊಡ್ಡುವ ಸೈನಿಕರ ಸೇವೆ ಬಲಿದಾನವನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದರು.

ಮೇಯರ್ ಸುಧಿರ್ ಶೆಟ್ಟಿ ಕಣ್ಣೂರು, ಉಪ ಮೇಯರ್ ಸುನೀತಾ, ನಿವೃತ್ತಿ ಬ್ರಿಗೇಡಿಯರ್ ಬಿ.ಎನ್. ರೈ ಸಂಘದ ಪ್ರ. ಕಾರ್ಯದರ್ಶಿ ಕ್ಯಾ| ದೀಪಕ್ ಅಡ್ಯಂತಾಯ, ಉಪಾಧ್ಯಕ್ಷ ಕರ್ನಲ್ ಜಯಚಂದ್ರ, ಕೋಶಾಧಿಕಾರಿ ಸುಧಿರ್ ಪೈ, ಸಮಗ್ರ ಕಲಿಕಾ ಕೇಂದ್ರದ ಸಚತಾ ನಂದಗೋವಾಲ್, ಲಯನ್ಸ್ ಇಂಟರ್ ನ್ಯಾಶನಲ್ ಡಿಸ್ಟ್ರಿಕ್ಟ್ 317 ಡಿ ಗವರ್ನರ್ ಬಿ.ಎಂ ಭಾರತಿ, ಮಂಗಳಾ ಆಸ್ಪತ್ರೆ ಚೇರ್ಮನ್ ಡಾ| ಗಣಪತಿ ಭಟ್, ರಾಷ್ಟ್ರಭಕ್ತ ನಾಗರಿಕಾ ವೇದಿಕೆಯ ಸಂದೀಪ್ ಪಂಪವೆಲ್, ಸಂದೀಪ್ ಅಂಬ್ಲಮೊಗರು, ಲಯನ್ಸ್ ಕ್ಲಬ್ 317 ಜೋನ್ ಚೇರ್ಮೇನ್ 317 ಲಯನ್ ಅನಿಲ್ ದಾಸ್ ಉಪಸ್ಥಿತರಿದ್ದರು.

