
Read Time:1 Minute, 11 Second
ಪ್ರಕೃತಿಯು ಅದ್ಭುತವಾದ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಹೇರಳವಾಗಿದೆ, ನಿಯಮಿತವಾಗಿ ಸೇವಿಸಿದರೆ ನಮ್ಮ ಆರೋಗ್ಯಕ್ಕೆ ಒಳ್ಳೆಯದು. ನಮ್ಮಲ್ಲಿ ಶಕ್ತಿಯನ್ನು ತುಂಬಿ ಚೈತನ್ಯವನ್ನು ಮರಳುವಂತೆ ಮಾಡುವ ಹಣ್ಣುಗಳಲ್ಲಿ ಸ್ಟಾರ್ ಫ್ರೂಟ್ (Star Fruits) ಕೂಡಾ ಒಂದು. ಕ್ಯಾರಂಬೋಲಾ ಅಥಾವಾ ಸ್ಟಾರ್ ಫ್ರೂಟ್ ಅಥವಾ ಕಮ್ರಖ್ (Kamrakh) ಎಂದು ಕೂಡ ಇದನ್ನು ಕರೆಯುತ್ತಾರೆ. ಇದು ಹುಳಿಮಿಶ್ರಿತ ಸಿಹಿ ಹಣ್ಣಾಗಿದ್ದು, ಈ ಹಣ್ಣಿನಲ್ಲಿ ಅನೇಕ ಪೋಷಕಾಂಶಗಳಿವೆ.


ಈ ಕಮ್ರಖ್ ಹಣ್ಣು ತನ್ನದೇ ಆದ ಅದ್ಭುತ ಆಹಾರ ಸೇರ್ಪಡೆಯಾಗಿದೆ. ಬಾಲಿವುಡ್‌ನ ಅತ್ಯಂತ ಫಿಟೆಸ್ಟ್ ದಿವಾ ಶಿಲ್ಪಾ ಶೆಟ್ಟಿ ಕೂಡ ಇದರ ಪೌಷ್ಟಿಕಾಂಶದ ಶಕ್ತಿಯನ್ನು ಶ್ಲಾಘಿಸುತ್ತಾರೆ. ಇದು ದೇಹವನ್ನು ದೀರ್ಘಕಾಲದವರೆಗೆ ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಸ್ಟಾರ್ ಹಣ್ಣು ಅನೇಕ ಔಷಧೀಯ ಗುಣಗಳನ್ನು ಹೊಂದಿದ್ದು, ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ.