ಕಡಬ: ಬ್ರೈನ್ ಸ್ಟ್ರೋಕ್ ನಿಂದ ನಿಧನರಾದ ಖ್ಯಾತ ಕಬಡ್ಡಿ ಆಟಗಾರ

0 0
Read Time:1 Minute, 14 Second

ಕಡಬ: ಕರಾವಳಿಯ ಹೆಸರಾಂತ ಆಟಗಾರ, ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರೋ ಕಬಡ್ಡಿಯಲ್ಲಿ ಲಕ್ಷಾಂತರ ಅಭಿಮಾನಿಗಳ ಗಮನ ಸೆಳೆದ ಕಡಬದ ಯುವ ಆಟಗಾರ ಕೋಕಿಲಾನಂದ ನಿಧನ ಹೊಂದಿದ್ದಾರೆ.

ಬಡತನವಿದ್ದರೂ ಹೃದಯ ಶ್ರೀಮಂತಿಕೆ ಇದ್ದ ಇವರು ಕೆಲವು ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಿ ಜೈಲಿಗೂ ಹೋಗಿ ಬಂದಿದ್ದರು. ಕಡಬ ನಿವಾಸಿಯಾಗಿದ್ದ ಇವರು ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ತಂದೆಗೆ ಹೃದಯದ ಖಾಯಿಲೆಯಿದ್ದು ತಾಯಿ ಕೂಡಾ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಪತ್ನಿ ಪಂಚಾಯತ್ ನಲ್ಲಿ ಮೂರು ದಿನ ಕೆಲಸ ಮಾಡುತ್ತಿದ್ದು ದಂಪತಿಗೆ ಪುಟ್ಟ ಮಗು ಕೂಡಾ ಇದೆ. ಈ ಸಂದರ್ಭ ಕುಟುಂಬಕ್ಕೆ ಬೆನ್ನೆಲುಬಾಗ ಬೇಕಿದ್ದ ಕೋಕಿಲಾನಂದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇವರ ನಿಧನಕ್ಕೆ ಅನೇಕ ಕಬಡ್ಡಿ ಆಟಗಾರರು, ಬಂಧು-ಬಳಗ, ಸ್ನೇಹಿತರು ಸಂತಾಪವನ್ನು ಸೂಚಿಸಿದ್ದಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *