
Read Time:1 Minute, 21 Second
ಉಡುಪಿ: ವಿದ್ಯಾರ್ಥಿಯೊಬ್ಬ ದೈವಕ್ಕೆ ಪತ್ರ ಬರೆದು ನನ್ನನ್ನು ಜಸ್ಟ್ ಪಾಸ್ ಮಾಡು ಸಾಕು ಎಂದು ಮನವಿ ಮಾಡಿದ ಅಪರೂಪದ ಘಟನೆ ಕುಂದಾಪುರದಲ್ಲಿ ನಡೆದಿದೆ. ಕುಂದಾಪುರದ ಹೊಳ ಮಗ್ಗಿ ಹೊರ ಬೊಬ್ಬರ್ಯ ದೇಗುಲದ ಕಾಣಿಕೆ ಹುಂಡಿಯ ಹಣ ಲೆಕ್ಕಾಚಾರ ಮಾಡುವ ಸಂದರ್ಭ ಈ ಪತ್ರ ಸಿಕ್ಕಿದೆ.


ಪರೀಕ್ಷೆ ಅಂದ್ರೆ ಭಯ ಯಾರಿಗಿರಲ್ಲ ಹೇಳಿ. ಕಲಿಕೆಯಲ್ಲಿ ಮುಂದಿರುವ ವಿದ್ಯಾರ್ಥಿಗಳಿಗೆ ಉತ್ತಮ ಅಂಕ ಬರಬೇಕು ಎನ್ನುವ ಆಸೆ ಇದ್ದರೆ ಸೋಂಬೇರಿ ವಿದ್ಯಾರ್ಥಿಗಳಿಗೆ ಜಸ್ಟ್ ಪಾಸ್ ಆದ್ರೆ ಸಾಕು ಎಂಬ ಯೋಚನೆ ಇರುತ್ತೆ. ಆ ರೀತಿ ಯೋಚಿಸಿದ ವಿದ್ಯಾರ್ಥಿಯೋರ್ವ ದೈವದ ಹುಂಡಿಯಲ್ಲಿ ಚೀಟಿ ಬರೆದು ಅಂಕಗಳ ಆಯ್ಕೆ ಕೊಟ್ಟು ಇಷ್ಟು ಕೊಡಿಸು ಸಾಕು ಅಂತ ಬೇಡಿಕೊಂಡಿದ್ದಾನೆ.
ಪತ್ರದಲ್ಲಿ ಪ್ರತಿಯೊಂದು ಪಠ್ಯ ವಿಷಯಕ್ಕೆ ಸಂಬಂಧಿಸಿ ಇಷ್ಟು ಅಂಕ ಬೇಕು ಎಂದು ಬರೆದಿದ್ದಾನೆ. ಇದಕ್ಕಿಂತ ಕಡಿಮೆ ಬೇಡವೇ ಬೇಡ ಎಂದು ಪ್ರಾರ್ಥಿಸಿಕೊಂಡಿದ್ದು ಇದೀಗ ಈ ಪತ್ರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಾ ಇದೆ.

