
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.


ಹುದ್ದೆಯ ವಿವರ:
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ
ಹುದ್ದೆ ಹೆಸರು:
ಅಸಿಸ್ಟಂಟ್ ಸೆಕ್ಷನ್ ಆಫೀಸರ್


ಹುದ್ದೆಗಳ ಸಂಖ್ಯೆ:
08

ಕರ್ನಾಟಕದಲ್ಲಿ ಉದ್ಯೋಗ ಸ್ಥಳ:
ಬೆಂಗಳೂರು
ವೇತನ:
35,400- 1,12,400
ವಿದ್ಯಾರ್ಹತೆ:
- ಪೇ ಮೆಟ್ರಿಕ್ಸ್ ಲೆವೆಲ್-4, ಲೆವೆಲ್-3 ನಲ್ಲಿ ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ, ರಾಜ್ಯ ಸರ್ಕಾರಿ ಇಲಾಖೆಗಳು, ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ ಹುದ್ದೆಗಳು, ಪಬ್ಲಿಕ್ ಸೆಕ್ಟಾರ್ ಅಧೀನದ ಸಂಸ್ಥೆ / ಮಂಡಳಿಗಳಲ್ಲಿ ಕಾರ್ಯಾನುಭವ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
- ಆಡಳಿತಾತ್ಮಕ, ಕಾನೂನು, ಸಂಸ್ಥಾಪನೆ, ಮಾನವ ಸಂಪನ್ಮೂಲ, ಹಣಕಾಸು, ಅಕೌಂಟ್ಸ್, ಬಜೆಟಿಂಗ್, ಪ್ಲಾನಿಂಗ್ ಅಂಡ್ ಪಾಲಿಸಿ, ಪ್ರಾಜೆಕ್ಟ್‌ಗಳ ಅಭಿವೃದ್ಧಿ ಮತ್ತು ನಿರ್ವಹಣೆ, ಇ-ಗವರ್ನೆನ್ಸ್ ವಿಷಯಗಳಲ್ಲಿ ಕಾರ್ಯಾನುಭವ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಇವರಿಗೆ ಆಧ್ಯತೆ ನೀಡಲಾಗುವುದು.
- ಕಂಪ್ಯೂಟರ್ ಬಳಕೆಯ ಜ್ಞಾನ ಇರಬೇಕು.
(Aadhar Recruitment:) ವಯೋಮಿತಿ:
ಅರ್ಜಿ ಸಲ್ಲಿಸಲು ಗರಿಷ್ಠ 56 ವರ್ಷ ವಯಸ್ಸು ಮೀರಿರಬಾರದು. ವರ್ಗಾವಾರು ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ. ಒಬಿಸಿ ವರ್ಗದವರಿಗೆ 3 ವರ್ಷ, ಎಸ್‌ಸಿ, ಎಸ್‌ಟಿ ವರ್ಗದವರಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ:
30-06-2025
ಅರ್ಜಿ ಸಲ್ಲಿಕೆ ಹೇಗೆ?;
ಅರ್ಹ ಮತ್ತು ಆಸಕ್ತರು ವೆಬ್ ವಿಳಾಸ https://uidai.gov.in/en/about-uidai/work-with-uidai/current-vacancies.html ಗೆ ಭೇಟಿ ನೀಡಿ.
ತೆರೆದ ವೆಬ್‌ಪೇಜ್‌ನಲ್ಲಿ ಪ್ರಸ್ತುತ ಪ್ರಕಟಿಸಿರುವ ಹುದ್ದೆಗಳ ಲಿಸ್ಟ್ ಬಿಡುಗಡೆ ಆಗುತ್ತದೆ.
ನಿಮ್ಮ ಆಸಕ್ತ ರಾಜ್ಯ, ನಗರದ ಹುದ್ದೆ ಅಧಿಸೂಚನೆ ಡೌನ್‌ಲೋಡ್ ಮಾಡಿಕೊಳ್ಳಿ.
ಅಧಿಸೂಚನೆಯನ್ನು ಸವಿವರವಾಗಿ, ಅರ್ಹತೆಯನ್ನು ಸರಿಯಾಗಿ ಓದಿಕೊಳ್ಳಿ.
ನಂತರ ನಿಗದಿತ ಅರ್ಹತೆ ಇದ್ದಲ್ಲಿ, ಅರ್ಜಿ ವಿಳಾಸವನ್ನು ಓದಿಕೊಂಡು, ಸದರಿ ವಿಳಾಸಕ್ಕೆ ನಿಮ್ಮ ಅರ್ಜಿ ತಲುಪುವಂತೆ ಸಲ್ಲಿಸಿ.
ಕರ್ನಾಟಕದಲ್ಲಿ ಉದ್ಯೋಗ ಬಯಸುವವರು ಅರ್ಜಿ ಸಲ್ಲಿಸಬೇಕಾದ ವಿಳಾಸ : ನಿರ್ದೇಶಕರು (ಹೆಚ್‌ಆರ್), ಭಾರತ ವಿಶಿಷ್ಟ ಗುರುತಿನ ಪ್ರಾಧಿಕಾರ, ಆಧಾರ್ ಕಾಂಪ್ಲೆಕ್ಸ್, ಎನ್‌ಟಿಐ ಲೇಔಟ್, ಟಾಟಾ ನಗರ, ಕೋಡಿಹಳ್ಳಿ, ಟೆಕ್ನಾಲಜಿ ಕೇಂದ್ರ, ಬೆಂಗಳೂರು – 560 092