ಹಲಸಿನ ಹಣ್ಣು ತಿಂದ್ರೆ ರೋಗ ನಿರೋಧಕ ಶಕ್ತಿ ಹೆಚ್ಚುವುದು..!

0 0
Read Time:4 Minute, 38 Second

ಹಲಸಿನ ಹಣ್ಣಿನಲ್ಲಿ ವಿಟಮಿನ್‌ ಸಿ ಮತ್ತು ಆ್ಯಂಟಿಆಕ್ಸಿಡೆಂಟ್ ಅಧಿಕ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು.

ಮೇ-ಜೂನ್‌ ತಿಂಗಳು ಬಂತೆಂದರೆ ಹಳ್ಳಿ ಇರಲಿ ನಗರ ಮಾರುಕಟ್ಟೆ ಇರಲಿ ಇರಲಿ ಹಲಸುಗಳ ಘಮ ಗಮ್ಮೆಂದು ಬರುತ್ತಿರುತ್ತದೆ. ಆ ಹಳದಿ ತೊಳೆ ನೋಡುವಾಗ ಅದನ್ನು ಬಾಯಲ್ಲಿ ಜಗಿದು ತಿನ್ನುವ ಆಸೆ ಬಂದೇ ಬರುವುದು.

ಇನ್ನು ಹಳ್ಳಿಗಳಲ್ಲಿ ಹಲಸಿನ ಹಣ್ಣಿನ ಮರ ಅಧಿಕ ಇರುವುದರಿಂದ ಸೀಸನ್ ಬಂತೆಂದರೆ ಇದರಿಂದ ಹಲಸಿನ ಹಿಟ್ಟು, ದೋಸೆ, ಇಡ್ಲಿ ಅಂತ ತರಾವರಿ ತಿಂಡಿಗಳನ್ನು ಮಾಡಿ ಸವಿಯುತ್ತಾರೆ. ಹಲಸಿನ ಹಣ್ಣಿನ ಸೀಸನ್ ಮುಗಿಯುವವರೆಗೆ ಅದರದ್ದೇ ಕಾರುಬಾರು ಜೋರಾಗಿರುತ್ತೆ.

ಹೊರಗಡೆ ಮುಳ್ಳು-ಮುಳ್ಳಾಗಿ ಒರಟಾಗಿ ಕಾಣುವ ಹಲಸಿನ ತೊಳೆ ಮೃದುವಾಗಿ ಸಿಹಿಯಾಗಿ ಕಣ್ಣಿಗೆ ತುಂಬಾ ಆಕರ್ಷಕವಾಗಿಯೂ ಇರುತ್ತದೆ. ಸೀಸನ್‌ ದೊರೆಯುವ ಈ ಹಣ್ಣು ತಿನ್ನುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು.

100ಗ್ರಾಂ ಹಲಸಿನ ಹಣ್ಣಿನಲ್ಲಿರುವ ಪೋಷಕಾಂಶಗಳು

ಕ್ಯಾಲೋರಿ: 94

ಕೊಬ್ಬು: 0.3 ಮಿಗ್ರಾಂ

ನಾರಿನಂಶ:2 ಗ್ರಾಂ

ಪ್ರೊಟೀನ್: 1 ಗ್ರಾಂ

ಪೊಟಾಷ್ಯಿಯಂ:303 ಮಿಗ್ರಾಂ

ಕ್ಯಾಲ್ಸಿಯಂ:34 ಮಿಗ್ರಾಂ

ಪೊಟಾಷ್ಯಿಯಂ:303 ಮಿಗ್ರಾಂ

ಕ್ಯಾಲ್ಸಿಯಂ:34 ಮಿಗ್ರಾಂ

ಕಾರ್ಬೋಹೈಡ್ರೇಟ್ಸ್:24 ಗ್ರಾಂ

ಫೋಲೆಟ್:14 mcg

ಕಬ್ಬಿಣದಂಶ:0.6 ಮಿಗ್ರಾಂ

ವಿಟಮಿನ್‌ಗಳು: ವಿಟಮಿನ್ ಎ, ವಿಟಮಿನ್ ಸಿ, ಥಿಯಾಮಿನ್, ರಿಬೋಫ್ಲೇವನ್, ಕ್ಯಾಲ್ಸಿಯಂ, ಪೊಟಾಷ್ಯಿಯಂ, ರಂಜಕ, ಕಬ್ಬಿಣದಂಶ, ಸೋಡಿಯಂ, ಸತು, ನಿಯಾಸಿನ್ ಹಾಗೂ ಇತರ ಪೋಷಕಾಂಶವಿರುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಹಲಸಿನ ಹಣ್ಣಿನಲ್ಲಿ ವಿಟಮಿನ್‌ ಸಿ ಮತ್ತು ಆ್ಯಂಟಿಆಕ್ಸಿಡೆಂಟ್ ಅಧಿಕ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು.

ಶಕ್ತಿ ವೃದ್ಧಿಸುವುದು

100 ಗ್ರಾಂ ಹಲಸಿನ ಹಣ್ಣಿನಲ್ಲಿ 94 ಕ್ಯಾಲೋರಿ ಇರುತ್ತದೆ ಹಾಗೂ ಇದರಲ್ಲಿ ಕಾರ್ಬ್ಸ್ ಕೂಡ ಇರುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚಿಸುವುದು. ಅಲ್ಲದೆ ಇದು ಸುಲಭವಾಗಿ ಜೀರ್ಣವಾಗುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ರಕ್ತದೊತ್ತಡ ನಿಯಂತ್ರಿಸುವುದರಿಂದ ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು

ಇದರಲ್ಲಿ ಪೊಟಾಷ್ಯಿಯಂ ಸರಿಯಾದ ಪ್ರಮಾಣದಲ್ಲಿ ಇರುವುದರಿಂದ ದೇಹದಲ್ಲಿ ಸೋಡಿಯಂ ಅನ್ನು ನಿಯಂತ್ರಣ ಮಾಡಿ, ನಮ್ಮ ರಕ್ತನಾಳ ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ. ಇದು ರಕ್ತದೊತ್ತಡ ನಿಯಂತ್ರಿಸುವುದು, ಇದರಿಂದಾಗಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಅಲ್ಲದೆ ದೇಹದ ಫಿಟ್ನೆಸ್‌ಗೆ ತುಂಬಾನೇ ಒಳ್ಳೆಯದು.

ಜೀರ್ಣಕ್ರಿಯೆಗೆ ಸಹಕಾರಿ

ಹಲಸಿನ ಹಣ್ಣಿನಲ್ಲಿ ನಾರಿನಂಶ ಇರುವುದರಿಂದ ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿ, ಇದರಿಂದ ಮಲಬದ್ಧತೆ ಸಮಸ್ಯೆ ಕೂಡ ಕಾಡುವುದಿಲ್ಲ.

ಮೂಳೆಗಳನ್ನು ಬಲ ಪಡಿಸುತ್ತದೆ

ಹಲಸಿನ ಹಣ್ಣಿನಲ್ಲಿ ಕ್ಯಾಲ್ಸಿಯಂ ಅಧಿಕವಿರುವುದರಿಂದ ಸಂಧಿವಾತ, ಮೂಳೆ ಸವೆತ ಮುಂತಾದ ಮೂಳೆ ಸಂಬಂಧಿತ ಸಮಸ್ಯೆ ಇರುವವರು ಇದನ್ನು ತಿಂದರೆ ಒಳ್ಳೆಯದು. ಇದು ಮೂಳೆಯ ಆರೋಗ್ಯವನ್ನು ಕಾಪಾಡುತ್ತೆ.

ಅಸ್ತಮಾ ನಿಯಂತ್ರಣದಲ್ಲಿಡುತ್ತದೆ

ಅಸ್ತಮಾ ಸಮಸ್ಯೆ ಇರುವವರು ಹಲಸಿನ ಹಣ್ಣು ತಿಂದರೆ ಒಳ್ಳೆಯದು. ದೇಹದಲ್ಲಿರುವ ಕಶ್ಮಲವನ್ನು ಹೊರ ಹಾಕುವುದರಿಂದ ಮಾಲಿನ್ಯದಿಂದ ಹೆಚ್ಚಾದ ಅಸ್ತಮಾವನ್ನು ನಿಯಂತ್ರಿಸುವುದು.

ಥೈರಾಯ್ಡ್‌ ಗ್ರಂಥಿಗೆ ತುಂಬಾ ಒಳ್ಳೆಯದು

ಥೈರಾಯ್ಡ್ ಸಮಸ್ಯೆ ಇರುವವರು ಹಲಸಿನ ಹಣ್ಣು ತಿಂದರೆ ಇದು ಹಾರ್ಮೋನ್‌ಗಳನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತೆ.

ಕಣ್ಣುಗಳ ಆರೋಗ್ಯಕ್ಕೆ ಒಳ್ಳೆಯದು

ಇದರಲ್ಲಿ ವಿಟಮಿನ್‌ ಎ (ಬೀಟಾ ಕೆರೋಟಿನ್ ) ಇರುವುದರಿಂದ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಅಲ್ಲದೆ ಇದು ಕಣ್ಣನ್ನು ನೇರಳಾತೀತ ಕಿರಣಗಳಿಂದ ಕೂಡ ರಕ್ಷಣೆ ನೀಡುತ್ತದೆ. ಹಲಸಿನ ಹಣ್ಣು ರೆಟಿನಾ ಸಂಬಂಧಿತ ಸಮಸ್ಯೆ ಉಂಟಾಗುವುದನ್ನು ತಡೆಗಟ್ಟುವುದು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *