ಇಂದು DYSP ಆಗಿ ಚಾರ್ಜ್‌ ತೆಗೆದುಕೊಳ್ಳಬೇಕಿದ್ದ ಅಧಿಕಾರಿ ದುರಂತ ಅಂತ್ಯ..!

0 0
Read Time:2 Minute, 36 Second

ಹಾಸನ: ಇಂದು ಡಿವೈಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಬೇಕಿತ್ತು. ಇಂತಹ ಹೊತ್ತಿನಲ್ಲೇ ಅಧಿಕಾರಿ ಬಾಳಲ್ಲಿ ವಿಧಿಯಾಟವಾಡಿದೆ. ಡ್ಯೂಟಿ ರಿಪೋರ್ಟ್‌ಗೆ ಬಂದ ದಿನವೇ ಪ್ರೊಬೇಷನರಿ ಐಪಿಎಸ್‌ ಅಧಿಕಾರಿ ಹರ್ಷವರ್ಧನ್, ಹಾಸನ ಬಳಿ ಭೀಕರ ರಸ್ತೆ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ.‌

ಹಾಸನದ ಎಸ್‌ಪಿ ಕಚೇರಿಯಲ್ಲಿ ಅಧಿಕಾರ ಸ್ವೀಕಾರಕ್ಕೆ ಆಗಮಿಸುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಮೈಸೂರಿನ ಪೊಲೀಸ್ ಅಕಾಡಮೆಯಿಂದ ಹಾಸನದ ಕಡೆ ಬರುತ್ತಿದ್ದ ವೇಳೆ ಪೊಲೀಸ್ ಜೀಪು ಅಪಘಾತಕ್ಕೀಡಾಗಿದೆ. ಐಪಿಎಸ್ ವೃತ್ತಿ ಜೀವನ ಆರಂಭಿಸಿದ ಮೊದಲ ದಿನವೇ ಹರ್ಷಬರ್ಧನ್ ದುರಂತ ಅಂತ್ಯ ಕಂಡಿದ್ದಾರೆ. ಪೊಲೀಸ್ ವಾಹನದ ಟೈಯರ್ ಸ್ಪೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ವಾಹನ ಅಪಘಾತವಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಮೈಸೂರಿನ ಐಜಿಪಿ ಕಚೇರಿಗೆ ತೆರಳಿ ಅಧಿಕಾರಿ ಭೇಟಿಯಾಗಿದ್ದ ಹರ್ಷಬರ್ಧನ್ ಮಹತ್ವದ ಮಾತುಕತೆ ನಡೆಸಿದ್ದರು. ಈ ವೇಳೆ ಹರ್ಷಬರ್ಧನ್‌ಗೆ ಶುಭಕೋರಿ ಕಳುಹಿಸಲಾಗಿತ್ತು. ಮಧ್ಯ ಪ್ರದೇಶ ಮೂಲದ ಹರ್ಷಬರ್ಧನ್ ಅಧಿಕಾರ ಸ್ವೀಕಾರಕ್ಕಾಗಿ ಮೈಸೂರಿನಿಂದ ಮಾರ್ಗದ ಮೂಲಕ ಹಾಸನಕ್ಕೆ ಆಗಮಿಸಿದ್ದಾರೆ. ಹರ್ಷಬರ್ಧನ್ ಸಾವಿನ ಸುದ್ದಿಯನ್ನು ಆಸ್ಪತ್ರೆ ಮುಖ್ಯಸ್ಥ ಡಾ. ಬಷೀರ್ ಸ್ಪಷ್ಟಪಡಿಸಿದ್ದಾರೆ.

ಮಾಹಿತಿ ಸಿಗುತ್ತಿದ್ದಂತೆ ಹಾಸನ ಎಸ್‌ಪಿ ಮೊಹಮದ್ ಸುಜಿತಾ, ಎಎಸ್‌ಪಿಗಳಾದ ತಮ್ಮಯ್ಯ, ವೆಂಕಟೇಶ ನಾಯ್ದು ಸ್ಥಳಕ್ಕೆ ಧಾವಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಹರ್ಷಬರ್ಧನ್ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪೊಲೀಸ್ ಅಧಿಕಾರಿಗಳ ದಂಡ ಆಸ್ಪತ್ರೆಯಲ್ಲಿ ಠಿಕಾಣಿ ಹೂಡಿತ್ತು. ವೈದ್ಯರ ತಂಡದ ಸಮಾಲೋಚನೆ ನಡೆಸಿತ್ತು.

ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸ್ಥಳಾಂತರ ಕುರಿತು ಪೊಲೀಸರು ಚರ್ಚಿಸಿದ್ದರು. ಆದರೆ ಹರ್ಷಬರ್ಧನ್ ಆರೋಗ್ಯ ಕ್ಷಣಕ್ಷಣಕ್ಕೂ ಚಿಂತಾಜನಕ ಸ್ಥಿತಿಗೆ ತಿರುಗಿತ್ತು. ಹರ್ಷಬರ್ಧನ್ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣಲಿಲ್ಲ. ಬದಲಾಗಿ ಕ್ಷಣಕ್ಷಣಕ್ಕೂ ಆರೋಗ್ಯ ಹದಗೆಟ್ಟಿತ್ತು ಎಂದು ಹೇಳಲಾಗುತ್ತಿದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *