IPL 2024 ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಐಪಿಎಲ್‌ಗೆ ಲಖನೌ ವಿದಾಯ; 5 ಬಾರಿಯ ಚಾಂಪಿಯನ್‌ಗೆ ಕೊನೆ ಸ್ಥಾನ

0 0
Read Time:3 Minute, 19 Second

ಮೊದಲು ಬ್ಯಾಟ್‌ ಮಾಡಿದ ಲಖನೌ 6 ವಿಕೆಟ್‌ಗೆ 214 ರನ್‌ ಕಲೆಹಾಕಿತು. ನಿಕೋಲಸ್‌ ಪೂರನ್‌ 29 ಎಸೆತಗಳಲ್ಲಿ 75 ರನ್‌ ಚಚ್ಚಿದರೆ, ಕೆ.ಎಲ್‌.ರಾಹುಲ್ 55 ರನ್‌ ಸಿಡಿಸಿದರು. ಚಾವ್ಲಾ 3 ವಿಕೆಟ್‌ ಕಬಳಿಸಿದರು. 

ಮುಂಬೈ: 5 ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ವಿರುದ್ಧ 18 ರನ್‌ಗಳಿಂದ ಗೆಲ್ಲುವುದರೊಂದಿಗೆ 17ನೇ ಆವೃತ್ತಿ ಐಪಿಎಲ್‌ಗೆ ಲಖನೌ ಸೂಪರ್‌ ಜೈಂಟ್ಸ್‌ ವಿದಾಯ ಹೇಳಿದೆ. ಈ ಗೆಲುವಿನೊಂದಿಗೆ ಲಖನೌ 14 ಪಂದ್ಯಗಳಲ್ಲಿ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನಿಯಾದರೆ, ಮುಂಬೈ 10ನೇ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲೇ ಬಾಕಿಯಾಯಿತು. 

ಮೊದಲು ಬ್ಯಾಟ್‌ ಮಾಡಿದ ಲಖನೌ 6 ವಿಕೆಟ್‌ಗೆ 214 ರನ್‌ ಕಲೆಹಾಕಿತು. ನಿಕೋಲಸ್‌ ಪೂರನ್‌ 29 ಎಸೆತಗಳಲ್ಲಿ 75 ರನ್‌ ಚಚ್ಚಿದರೆ, ಕೆ.ಎಲ್‌.ರಾಹುಲ್ 55 ರನ್‌ ಸಿಡಿಸಿದರು. ಚಾವ್ಲಾ 3 ವಿಕೆಟ್‌ ಕಬಳಿಸಿದರು. 

ಇನ್ನು ಬೃಹತ್‌ ಗುರಿ ಬೆನ್ನತ್ತಿದ ಮುಂಬೈ 196 ರನ್ ಗಳಿಸಿ ಸೋಲೊಪ್ಪಿಕೊಂಡಿತು. ರೋಹಿತ್‌ ಶರ್ಮಾ 38 ಎಸೆತಗಳಲ್ಲಿ 68 ರನ್‌ ಸಿಡಿಸಿದರು. ಕೊನೆಯಲ್ಲಿ ನಮ್ ಧೀರ್ ಕೇವಲ 28 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ ಅಜೇಯ 62 ರನ್ ಬಾರಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಮುಂಬೈ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಪಲ್ಯ ತಂಡವನ್ನು ಸೋಲಿಗೀಡಾಗುವಂತೆ ಮಾಡಿತು.

ಐಪಿಎಲ್‌ನಲ್ಲಿ ಪಡಿಕ್ಕಲ್‌ ಸೂಪರ್‌ ಪ್ಲಾಫ್‌: 7 ಪಂದ್ಯದಲ್ಲಿ ಕೇವಲ 38 ರನ್‌!

ಮುಂಬೈ: ದೇಸಿ ಟೂರ್ನಿಗಳಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದ ಕರ್ನಾಟಕ ಬ್ಯಾಟರ್‌ ದೇವದತ್‌ ಪಡಿಕ್ಕಲ್‌ ಈ ಬಾರಿ ಐಪಿಎಲ್‌ನಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ಪರ ಹೀನಾಯ ಪ್ರದರ್ಶನ ತೋರಿದ್ದಾರೆ.

ಅವರು ಈ ಬಾರಿ ಟೂರ್ನಿಯಲ್ಲಿ 7 ಪಂದ್ಯಗಳನ್ನಾಡಿದ್ದು, ಕೇವಲ 38 ರನ್‌ ಕಲೆಹಾಕಿದ್ದಾರೆ. ರಾಜಸ್ಥಾನ ರಾಯಲ್ಸ್‌ ವಿರುದ್ಧ ಸೊನ್ನೆಗೆ ಔಟಾಗಿದ್ದ ಅವರು, ಬಳಿಕ ಪಂಜಾಬ್‌ ಕಿಂಗ್ಸ್‌ ವಿರುದ್ಧ 9, ಆರ್‌ಸಿಬಿ ವಿರುದ್ಧ 6, ಗುಜರಾತ್ ಟೈಟಾನ್ಸ್‌ ವಿರುದ್ಧ 7, ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 3 ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 13 ರನ್‌ ಗಳಿಸಿದ್ದರು. ಶುಕ್ರವಾರ ಮುಂಬೈ ಇಂಡಿಯನ್ಸ್‌ ವಿರುದ್ಧ ಆಡುವ ಅವಕಾಶ ಪಡೆದರೂ ಖಾತೆ ತೆರೆಯಲು ವಿಫಲರಾದರು.

ಹಲವು ಅವಕಾಶಗಳ ಹೊರತಾಗಿಯೂ ಸತತವಾಗಿ ವಿಫಲರಾಗುತ್ತಿರುವ ದೇವದತ್‌ ಪಡಿಕ್ಕಲ್‌ ಅವರನ್ನು ಮುಂದಿನ ಆವೃತ್ತಿಯ ಐಪಿಎಲ್‌ ಹರಾಜಿಗೂ ಮುನ್ನ ಲಖನೌ ಸೂಪರ್‌ ಜೈಂಟ್ಸ್‌ ತಂಡ ಕೈಬಿಡುವ ಸಾಧ್ಯತೆ ಹೆಚ್ಚಿದೆ. ಕಳೆದ ಬಾರಿ ರಾಜಸ್ಥಾನ ರಾಯಲ್ಸ್‌ ಪರ ಆಡಿದ್ದ ಪಡಿಕ್ಕಲ್‌, 11 ಪಂದ್ಯಗಳಲ್ಲಿ 261 ರನ್‌ ಕಲೆಹಾಕಿದ್ದರು.

ಈ ಬಾರಿ ಐಪಿಎಲ್‌ಗೂ ಮುನ್ನ ಅವರು ಕರ್ನಾಟಕ ಹಾಗೂ ಭಾರತ ‘ಎ’ ತಂಡಗಳ ಪರ ಅಭೂತಪೂರ್ವ ಪ್ರದರ್ಶನ ತೋರಿದ್ದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *