
Read Time:41 Second
ಮಂಗಳೂರು: ಎಸ್ ಪಿ ವೈ ಎಸ್ ಎಸ್ ರಿಜಿಸ್ಟರ್ ಕರ್ನಾಟಕ, ತುಮಕೂರು ಕೇಂದ್ರ ಸಮಿತಿ ಮಂಗಳೂರು ಮಹಾನಗರ ಇವರು 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶಾರದಾ ವಿದ್ಯಾಲಯದಲ್ಲಿ ದಿನಾಂಕ 21 ಜೂನ್ 2025 ಶನಿವಾರದಂದು ಬೆಳಿಗ್ಗೆ 5.00 ರಿಂದ 6.30 ವರೆಗೆ ಸಾರ್ವಜನಿಕರ ಸೇರುವಿಕೆಯೊಂದಿಗೆ ಆಚರಿಸಲಾಗುವುದು ಎಂದು ಎಸ್ ಪಿ ವೈ ಎಸ್ ಎಸ್ ನ ಮಹಾನಗರ ಸಂಚಾಲಕರಾದ ಶ್ರೀಯುತ ಆನಂದ ಕುಂಟಿನಿ ರವರು ತಿಳಿಸಿರುತ್ತಾರೆ ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ನೀಡಿದ್ದಾರೆ.

