
ಮಂಗಳೂರು: ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ ನ ಮೂಲಕ ಕಳೆದ 12 ವರ್ಷಗಳಿಂದ ಸೇವಾ ಕ್ಷೇತ್ರದಲ್ಲಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಟ್ರಸ್ಟ್ ನ ವತಿಯಿಂದ ನಡೆಸಲ್ಪಡುವ ಎರಡನೇ ಸೇವಾ ಯೋಜನೆ ದಾಸ್ ಒಲ್ಡ್ ಏಜ್ ಹೆಲ್ತ್ ಕೇರ್ ಹೋಂ ಇದೀಗ ಕುಡುಪುವಿನ ಕಮಲ ನಿವಾಸ ಕಟ್ಟಡದಲ್ಲಿ ಪೂಜ್ಯ ಶ್ರೀ ಶ್ರೀ ಶ್ರೀ ಮೋಹನ್ ದಾಸ ಸ್ವಾಮೀಜಿ ಶ್ರೀ ಕ್ಷೇತ್ರ ಮಾಣಿಲ ಇವರ ದಿವ್ಯ ಆಶೀರ್ವಚನದೊಂದಿಗೆ ಹಾಗೂ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ದಿವ್ಯ ಹಸ್ತದಲ್ಲಿ ಉದ್ಘಾಟನೆಗೊಳ್ಳಲಿದೆ.



ಜಿಲ್ಲಾ ಲಯನ್ಸ್ ಗವರ್ನರ್ ಶ್ರೀ ಬಿ ಎಂ ಭಾರತಿ ಹಾಗೂ ಮುಂತಾದವರ ಉಪಸ್ಥಿತಿಯಲ್ಲಿ ಸಮಾಜ ಸೇವಕ ಹಾಗೂ ಸಾಧನೆಗೈದ ಈಶ್ವರ್ ಮಲ್ಪೆ ಇವರನ್ನು ವಿಶೇಷವಾಗಿ ಸನ್ಮಾನಿಸುವ ಮೂಲಕ ವಿದ್ಯುಕ್ತವಾಗಿ ಉದ್ಘಾಟನೆಗೊಳ್ಳಲಿದೆ ಎಂದು ಸ್ಥಾಪಕ ಟ್ರಸ್ಟಿ ಲಯನ್ ಅನಿಲ್ ದಾಸ್,ಆಶಲತಾ ದಾಸ್ ತಿಳಿಸಿರುತ್ತಾರೆ.
ಲಯನ್ಸ್ ಜಿಲ್ಲಾ ಗವರ್ನರಾದ ಶ್ರೀಮತಿ ಬಿ.ಎಂ ಭಾರತಿ ಇವರು ಉದ್ಘಾಟನೆ ನಡೆಸಲಿರುವರು. ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ. ಮತ್ತು ಡಿಎಚ್‌ಒ ಡಾ.ತಿಮ್ಮಯ್ಯ, ವೀರನಾರಾಯಣ ದೇವಸ್ಥಾನ ಟ್ರಸ್ಟಿ ಪುರುಷೋತ್ತಮ ಕಲ್ಬವಿ, ಪ್ರೇಮಾನಂದ ಕುಲಾಲ್, ಮೆಲ್ವಿನ್ ಡಿಸೋಜ, ಸಂಜಿತ್ ಶೆಟ್ಟಿ, ರೊನಾಲ್ಡ್ ಗೋಮ್ಸ್, ವೇಣಿ ಮರೋಳಿ, ಭಾರತಿ ಶೆಟ್ಟಿ, ಸುಜನ್ ದಾಸ್ ಕುಡುಪು, ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.



