
Read Time:1 Minute, 22 Second
ಮಂಗಳೂರು: ನಗರದ ಸುರತ್ಕಲ್ ಸಮೀಪ ಭಾರೀ ಅಕ್ರಮ ಕಸಾಯಿಖಾನೆಯೊಂದು ಪತ್ತೆಯಾಗಿದ್ದು, ಪೊಲೀಸರನ್ನೇ ಬೆಚ್ಚಿ ಬೀಳಿಸಿದ ಘಟನೆ ಕೃಷ್ಣಾಪುರ 8ನೇ ಬ್ಲಾಕ್ ಬಳಿ ಸಂಭವಿಸಿದೆ.


ವಿಶ್ವ ಹಿಂದೂ ಪರಿಷತ್, ಬಜರಂಗದಳ ಸುರತ್ಕಲ್ ಪ್ರಖಂಡ ನೀಡಿದ ಮಾಹಿತಿಯಂತೆ ಕೃಷ್ಣಾಪುರ ಪರಿಸರದ ಒಂದು ಮನೆಯಲ್ಲಿ ದಾಳಿ ನಡೆಸಿದಾಗ 16ಗೋವುಗಳ ಸಹಿತ ಕೆ.ಜಿ.ಗಟ್ಟಲೆ ದನದ ಮಾಂಸ ಪತ್ತೆಯಾಗಿದೆ. ಸುಸಜ್ಜಿತ ಕಾಂಕ್ರೀಟ್ ಮನೆಯೊಂದರಲ್ಲಿ ಅಕ್ರಮವಾಗಿ ದನವನ್ನು ಕಡಿದು ಮಾಂಸವನ್ನಾಗಿ ಪರಿವರ್ತಿಸಿ ಸ್ಥಳೀಯ ಹೋಟೆಲ್ ಸಹಿತ ವಿವಿಧೆಡೆ ಸರಬರಾಜು ಮಾಡಲಾಗುತ್ತಿತ್ತು. ಪೊಲೀಸರ ದಾಳಿಯ ವೇಳೆ 16ಕ್ಕೂ ಅಧಿಕ ಗೋವುಗಳು ಪತ್ತೆಯಾಗಿದ್ದು, ಎಲ್ಲವನ್ನೂ ರಕ್ಷಸಲಾಗಿದೆ ಎಂದು ಮಾಹಿತಿ ತಿಳಿಯಲಾಗಿದೆ.
ಬಜರಂಗದಳ ಕಾರ್ಯಕರ್ತರು ಮತ್ತು ಸುರತ್ಕಲ್ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ದನಗಳನ್ನು ರಕ್ಷಸಲಾಗಿದೆ ಹಾಗೂ ದನದ ಮಾಂಸದ ವಾಹನವನ್ನು ಸುರತ್ಕಲ್ ಪೊಲೀಸರು ವಶಕ್ಕೆ ಪಡೆದು ಕೇಸು ದಾಖಲಿಸಿದಕೊಂಡಿದ್ದಾರೆ.


ಆರೋಪಿಗಳು ಪರಾರಿಯಾಗಿದ್ದಾರೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
