ಸರ್ಕಾರದಿಂದ ‘ಮಹಿಳೆಯರ ಗರ್ಭಕಂಠದ ಕ್ಯಾನ್ಸರ್ ತಡೆಗೆ ಮಹತ್ವದ ಕ್ರಮ: 14 ವರ್ಷದ ಹೆಣ್ಣುಮಕ್ಕಳಿಗೆ HPV ಲಸಿಕೆ

0 0
Read Time:7 Minute, 21 Second

ರಾಜ್ಯದಲ್ಲಿ ಮಹಿಳೆಯರಲ್ಲಿನ ಗರ್ಭಕಂಠದ ಕ್ಯಾನ್ಸರ್ ತಡೆಗೆ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. 14 ವರ್ಷದ ಹೆಣ್ಣುಮಕ್ಕಳಿಗೆ ಗರ್ಭಕಂಠ ಕ್ಯಾನ್ಸರ್ ತಡೆಗಾಗಿ ಹೆಚ್ ಪಿ ವಿ ಲಸಿಕಾಕರಣ ನೀಡಲಾಗುವುದು ಅಂತ ಘೋಷಿಸಿದೆ.

ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಮುಖ್ಯ ಮಂತ್ರಿಯವರ 2025-26ನೇ ಸಾಲಿನ ಆಯವ್ಯಯ ಘೋಷಣೆ ಕಂಡಿಕೆ-42ರಲ್ಲಿ “ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟಲು ಪಥಮ ಹಂತದಲ್ಲಿ ಗಣಿ ಭಾದಿತ ಮತ್ತು ಕಲ್ಯಾಣ ಕರ್ನಾಟಕ ಪುದೇಶದ 20 ತಾಲ್ಲೂಕುಗಳಲ್ಲಿ 9 ಕೋಟಿ ರೂ. ವೆಚ್ಚದಲ್ಲಿ 14 ವರ್ಷದ ಹೆಣ್ಣು ಮಕ್ಕಳಿಗೆ HPV ಲಸಿಕೆಯನ್ನು ನೀಡಲಾಗುವುದು” ಎಂದು ಘೋಷಿಸಲಾಗಿದೆ.

ಈ ಯೋಜನೆಯು ಹೊಸಯೋಜನೆಯಾಗಿದ್ದು, ಈ ಯೋಜನೆಯನ್ನು ಕಲ್ಯಾಣ ಕರ್ನಾಟಕ ಮತ್ತು ಗಣಿಭಾದಿತ ಪುದೇಶಗಳಲ್ಲಿ KKRDB ಮತ್ತು KMERC ಅನುದಾನದಲ್ಲಿ ಅನುಷ್ಠಾನಗೊಳಿಸಲು ಕ್ರಮ ವಹಿಸುವುದು ಎಂದು ತಿಳಿಸಲಾಗಿದೆ.

ಮೇಲೆ ಕ್ರಮ ಸಂಖ್ಯೆ (3)ರಲ್ಲಿ ಓದಲಾದ ಕಡತ ಸಂಖ್ಯೆ: HFW/58/PRS/2025ರಲ್ಲಿ ಹೂಮನ್ ವ್ಯಾಪಿಲೋಮ ವೈರಸ್ (HPV) 200 ಕ್ಕೂ ಹೆಚ್ಚು ತಳಿಗಳನ್ನು ಹೊಂದಿದೆ. ಇದರಲ್ಲಿ HPV 16 ಮತ್ತು 18 ರಂತಹ ಕೆಲವು ಹೆಚ್ಚು ಅಪಾಯಕಾರಿ ವೈರಸ್‌ಗಳು ಗರ್ಭಕಂಠದ ಕ್ಯಾನ್ಸರ್‌ಗೆ ಸಂಬಂಧಿಸಿವೆ. HPV ಗರ್ಭಕಂಠದ ಜೀವಕೋಶಗಳಿಗೆ ಸೋಂಕು ತಗುಲಿ, ಬದಲಾವಣೆಗಳನ್ನು ಉಂಟುಮಾಡುತ್ತದೆ.ಇದು ಕ್ಯಾನ್ಸರ್ ಆಗಿ ಪರಿವರ್ತನೆಯಾಗಬಹುದು, ಸಾಮಾನ್ಯವಾಗಿ ಯಾವುದೇ ರೋಗ ಲಕ್ಷಣಗಳಿಲ್ಲದ ಕ್ಯಾನ್ಸರ್ ಕಂಡುಬರುತ್ತದೆ.

ದೇಶದಲ್ಲಿ ಮಹಿಳೆಯರು ಗರ್ಭಕಂಠ ಕ್ಯಾನ್ಸರ್‌ನಿಂದಾಗಿ ಎರಡನೇ ಅತೀ ಹೆಚ್ಚಿನ ಸಾವು ಸಂಭವಿಸುತ್ತಿದೆ. ಚುಚ್ಚುಮದ್ದು ಮಾತ್ರ HPV ವೈರಸ್‌ನಿಂದ ಉಂಟಾಗುವ ಕ್ಯಾನ್ಸರ್‌ಗಳನ್ನು ಕಡಿಮೆಗೊಳಿಸಲು ಸಾಧ್ಯವಾಗುವುದು.

ಸಾರ್ವಜನಿಕ ಆರೋಗ್ಯದಲ್ಲಿ ಗರ್ಭಕಂಠದ ಕ್ಯಾನ್ಸರ್‌ನ್ನು ಸಂಪೂರ್ಣವಾಗಿ ತೊಡೆದುಹಾಕಲು 2020ರ WHO ಅಂತರಾಷ್ಟ್ರೀಯ ಕಾರ್ಯತಂತ್ರವಾಗಿದೆ. ಇದಕ್ಕಾಗಿ HPV ಚುಚ್ಚುಮದ್ದನ್ನು ಎಲ್ಲಾ ರಾಷ್ಟ್ರೀಯ ಚುಚ್ಚುಮದ್ದು ಕಾರ್ಯಕ್ರಮಗಳಲ್ಲಿ ಸೇರ್ಪಡೆ ಮಾಡಿ ಹಾಗೂ ಈ ಚುಚ್ಚುಮದ್ದು 15ನೇ ವಯಸ್ಸಿನ ಎಲ್ಲಾ ಹೆಣ್ಣುಮಕ್ಕಳಿಗೂ 2030ರ ವೇಳೆಗೆ ಶೇ.90ರಷ್ಟು ತಲುಪಲು ತೀರ್ಮಾನಿಸಲಾಗಿದೆ. ದಿನಾಂಕ:26.07.2023ರಂದು ನಡೆದ 18ನೇ National Technical Group of Immunization (NTAGI) ಸಭೆಯಲ್ಲಿ ಸ್ಥಳೀಯವಾಗಿ ಅಭಿವೃದ್ಧಿ ಪಡಿಸಿದ qHPV ಚುಚ್ಚುಮದ್ದನ್ನು Universal Immunization Program (UIP) ನಲ್ಲಿ 2 Dose ಬಳಸಲು ಶಿಫಾರಸ್ಸು ಮಾಡಲಾಗಿದೆ. qHPV ಚುಚ್ಚುಮದ್ದು 4 ತರಹದ HPV ವೈರಸ್‌ಗಳನ್ನು ತಡೆಗಟ್ಟುವುದು – Type 6 Level 16 and 18. ಈ ಚುಚ್ಚುಮದ್ದು HPV 16 ಮತ್ತು 18 ರಿಂದ ಉಂಟಾಗಬಹುದಾದ ಗರ್ಭಕಂಠ ಕ್ಯಾನ್ಸರ್ ಹಾಗೂ ಇತರೆ ಕ್ಯಾನ್ಸರ್‌ಗಳನ್ನು ತಡೆಗಟ್ಟುವುದು.

ದಿನಾಂಕ:19.04.2025ರಂದು ನಡೆದ Technical Specification Committee ಯೂ ಸಹಾ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ 9-14ರ ವಯಸ್ಸಿನ ಹೆಣ್ಣು ಮಕ್ಕಳಿಗೆ 2 Dose ಚುಚ್ಚುಮದ್ದು ಕ್ಯಾನ್ಸರ್ ತಡೆಯಲು ಸಾಕಾಗುವುದೆಂದು ಶಿಫಾರಸ್ಸು ಮಾಡಲಾಗಿದೆ.

ಮೊದಲಿಗೆ 14ನೇ ವಯಸ್ಸಿನ ಹೆಣ್ಣುಮಕ್ಕಳಿಗೆ ಚುಚ್ಚುಮದ್ದನ್ನು ನೀಡಲು ಆದ್ಯತೆ ನೀಡುವುದು ಹದಿನಾಲ್ಕು ವರ್ಷವನ್ನು ಲಸಿಕೆ ಹಾಕುವ ವಯಸ್ಸಾಗಿ ಆದ್ಯತೆ ನೀಡುವುದರಿಂದ, ಅವರು ಅರ್ಹ ವಯಸ್ಸನ್ನು ತಲುಪುವ ಮೊದಲು ರಕ್ಷಣೆ ಸಿಗುತ್ತದೆ. ಕಾರ್ಯಕ್ರಮದ ದೃಷ್ಟಿಕೋನದಿಂದ ಇದು ಟ್ರ್ಯಾಕಿಂಗ್, ವರದಿ ಮಾಡುವಿಕೆ ಮತ್ತು ಕಾರ್ಯಕ್ರಮದ ಹೊಣೆಗಾರಿಕೆಯಲ್ಲಿ ಸ್ಪಷ್ಟತೆಯನ್ನು ನೀಡುತ್ತದೆ.

ಗಣಿಬಾಧಿತ ಪುದೇಶದ 8 ತಾಲ್ಲೂಕುಗಳಿಗೆ ಪ್ರತಿ HPV ವ್ಯಾಕ್ಸಿನ್‌ಗೆ ರೂ.1260 /- ಪ್ರತಿ Dose ಗೆ ಮತ್ತು ಪ್ರತಿ ಸಿರಿಂಜ್ ಗೆ ರೂ 5/- ರಂತೆ 37470 ಅರ್ಹ 14 ವಯಸ್ಸಿನ ಸರ್ಕಾರಿ ಶಾಲೆಗಳು, ಸರ್ಕಾರಿ ಅನುದಾನಿತ ಶಾಲೆಗಳು ಮತ್ತು ಶಾಲೆಬಿಟ್ಟ ಹೆಣ್ಣುಮಕ್ಕಳಿಗಾಗಿ 2 Dose ಗಳನ್ನು ನಿಗಧಿತ ಅವಧಿಯಲ್ಲಿ ನೀಡಲು ಒಟ್ಟು ರೂ. 4.74 ಕೋಟಿ KMERC ಅನುದಾನದಿಂದ ಚುಚ್ಚುಮದ್ದು ಖರೀದಿಸಲು ಉದ್ದೇಶಿಸಲಾಗಿದೆ.

ಈ ಪುಸ್ತಾವನೆಯನ್ನು ದಿನಾಂಕ:05.06.2025 ರಂದು ನಡೆದ KMERC ಯ 21 ನೇ Over seeing Authorityಯಲ್ಲಿ ಅನುಮೋದಿತವಾಗಿದ್ದು, H&FW/32/2022-23/368, CEPMIZ / ದಿನಾಂಕ:18.06.2025 ರಲ್ಲಿ ಕೆಳಕಂಡಂತೆ HPV ಚುಚ್ಚುಮದ್ದಿಗಾಗಿ ಅನುಮೋದನೆ ನೀಡಲಾಗಿದೆ.
1. ತುಮಕೂರು ಜಿಲ್ಲೆ ಗುಬ್ಬಿ, ಚಿಕ್ಕನಾಯಕನಹಳ್ಳಿ, ಮತ್ತು ತಿಪಟೂರು ತಾಲ್ಲೂಕುಗಳು – ರೂ.76 ಲಕ್ಷಗಳು
2. ಬಳ್ಳಾರಿ ಜಿಲ್ಲೆ – ಸಂಡೂರು ತಾಲ್ಲೂಕು – ರೂ.186 ಲಕ್ಷಗಳು,
3. ಚಿತ್ರದುರ್ಗ ಜಿಲ್ಲೆ – ಹೊಳಲ್ಕೆರೆ, ಹೊಸದುರ್ಗ ಮತ್ತು ಮೊಳಕಾಲೂರು ತಾಲ್ಲೂಕುಗಳು- ರೂ.76 ಲಕ್ಷಗಳು ಮತ್ತು
4. ವಿಜಯನಗರ ಜಿಲ್ಲೆ – ಹೊಸಪೇಟೆ ತಾಲ್ಲೂಕು – ರೂ.136 ಲಕ್ಷಗಳು

ಮೇಲಿನ ವಿವರಗಳ ಹಿನ್ನೆಲೆಯಲ್ಲಿ HPV ಚುಚ್ಚುಮದ್ದು ಕಾರ್ಯಕ್ರಮವನ್ನು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ PHH Ration card ಹೊಂದಿರುವ ಗಣಿಬಾಧಿತ ಮೇಲೆ ತಿಳಿಸಿರುವ 8 ತಾಲ್ಲೂಕುಗಳ 14 ವಯಸ್ಸಿನ ಸರ್ಕಾರಿ ಶಾಲೆಗಳು, ಸರ್ಕಾರಿ ಅನುದಾನಿತ ಶಾಲೆಗಳು ಮತ್ತು ಶಾಲೆಬಿಟ್ಟ ಹೆಣ್ಣು ಮಕ್ಕಳಿಗಾಗಿ 2 Dose ಗಳನ್ನು KMERC ಅನುಮೋದಿಸಿದ ರೂ.4.74ಕೋಟಿ ಅನುದಾನದಲ್ಲಿ ಕೈಗೊಳ್ಳಲು ಹಾಗೂ ಅಗತ್ಯವಿರುವ ಚುಚ್ಚುಮದ್ದುಗಳನ್ನು KTPP ಕಾಯ್ದೆ ನಿಯಮಗಳನ್ನು ಅನುಸರಿಸಿ KSMSCL ಮುಖಾಂತರ ಸಂಗ್ರಹಿಸಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಚುಚ್ಚುಮದ್ದು ವಿಭಾಗದಿಂದ ಅನುಷ್ಕಾನಗೊಳಿಸಲು ಅನುಮೋದನೆ ನೀಡುವಂತೆ ಕೋರಲಾಗಿದೆ.

ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, 2025-26ನೇ ಸಾಲಿನಲ್ಲಿ ಆಯವ್ಯಯ ಘೋಷಣೆಯ ಖಂಡಿಕೆ 142ರ ಭಾಗಶಃ ಅನುಷ್ಠಾನವಾಗಿ 14 ವರ್ಷದ ಹೆಣ್ಣು ಮಕ್ಕಳಿಗೆ HPV ಸೋಂಕಿನಿಂದ ರಕ್ಷಣೆ ನೀಡಲು ಮತ್ತು ಸಂಭಾವ್ಯ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಗಣಿಬಾಧಿತ ಈ ಕೆಳಕಂಡ 4 ಜಿಲ್ಲೆಗಳ 8 ತಾಲ್ಲೂಕುಗಳಲ್ಲಿ KMERC ಅನುಮೋದಿಸಿರುವ ರೂ.4.74 ಕೋಟಿಗಳ ಅನುದಾನದಲ್ಲಿ ಚುಚ್ಚುಮದ್ದು ಕಾರ್ಯಕ್ರಮವನ್ನು ಕೆಳಕಂಡ ಷರತ್ತಿಗೊಳಪಟ್ಟು ಕೈಗೊಳ್ಳಲು ಅನುಮೋದನೆ ನೀಡಲಾಗಿದೆ ಎಂದಿದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *