
Read Time:1 Minute, 2 Second
ಮಂಗಳೂರು: ಲಯನ್ಸ್ ಕ್ಲಬ್ ಪಂಪವೆಲ್ ಮಂಗಳೂರು ಇದರ ಝೋನ್ ಸೋಶಿಯಲ್ ಕಾರ್ಯಕ್ರಮವು ಲಯನ್ಸ್ ಅಶೋಕ ಭವನ ಕದ್ರಿ ಮಂಗಳೂರು ಸಭಾಂಗಣದಲ್ಲಿ ನಡೆಯಿತು.



ಅಧ್ಯಕ್ಷ ರಾದ ವಾಣಿ ಶೆಟ್ಟಿ ಹಾಗೂ ಮುಖ್ಯ ಅತಿಥಿಯಾಗಿ ಜೋನ್ ವಲಯ ಅಧ್ಯಕ್ಷರು ಲಯನ್ ಅನಿಲ್ ದಾಸ್ ದಂಪತಿಗಳು ಮತ್ತು ಸಾನಿಧ್ಯ ವಿಶೇಷ ಮಕ್ಕಳ ಕೇಂದ್ರ ಶಕ್ತಿನಗರ ಇದರ ಅಧ್ಯಕ್ಷರು ಶ್ರೀ ವಸಂತ ಶೆಟ್ಟಿ ಹಾಗೂ ಕ್ಲಬ್ ಸೆಕ್ರೆಟರಿ ರಮ್ಯಾ ಶೆಟ್ಟಿ ಕೋಶಾಧಿಕಾರಿ ವೀಣಾ ಮಂಗಳ, ಸ್ಥಾಪಕ ಅಧ್ಯಕ್ಷರು ರಾಜೇಶ್ ಶೆಟ್ಟಿ ಶಬರಿ ಹಾಗೂ ಅರವಿಂದ್ ಶೆಣೈ, ತುಲಾರ್ ರೈ, ಯಶವಂತ ಪೂಜಾರಿ ಹಾಗೂ ಇನ್ನಿತರ ಲಯನ್ಸ್ ಗಣ್ಯರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಲಯನ್ ಅನಿಲ್ ದಾಸ್ ದಂಪತಿಗಳನ್ನು ಸನ್ಮಾನಿಸಲಾಯಿತು ಬಳಿಕ ವಿವಿಧ ಮನರಂಜನೆಗಳೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

