
Read Time:45 Second
ದ.ಕ ಜಿಲ್ಲೆಯಲ್ಲಿ ಶಾಲೆಗಳಿಗೆ ಕಾಲೇಜುಗಳಿಗೆ ರಜೆ ಎಂದು ಸಾರುವ ಜಿಲ್ಲಾಧಿಕಾರಿ ಆದೇಶದ ನಕಲಿ ಪ್ರತಿ ಹರಿದಾಡಿದ ಪರಿಣಾಮ ದ ಕ ಜಿಲ್ಲಾಧಿಕಾರಿ ಇದಕ್ಕೆ ಸ್ಪಷ್ಟನೆ ನೀಡಿದ್ದು ನಾಳೆ ಅಂದರೆ ಜು.18 ರಂದು ಶಾಲೆ, ಕಾಲೇಜು ಎಂದಿನಂತೆ ಪ್ರಾರಂಭವಾಗಲಿದೆ ಎಂದು ಸ್ಫಷ್ಟನೆ ನೀಡಿದ್ದಾರೆ. ಎಂದಿನಂತೆ ಶಾಲಾ, ಕಾಲೇಜುಗಳಲ್ಲಿ ತರಗತಿ ನಡೆಯಲಿವೆ.


ದ.ಕ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಇದ್ದು ಮೀನುಗಾರರಿಗೆ ಮಾತ್ರ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.