
Read Time:1 Minute, 15 Second
ಮಂಗಳೂರು: ಹಿಂದೂ ಯುವ ಸೇನಾ ಆಶ್ರಯದಲ್ಲಿ ಮಂಗಳೂರಿನ ನೆಹರೂ ಮೈದಾನದಲ್ಲಿ ಆಚರಿಸಿಕೊಂಡು ಬಂದ 32 ನೇ ವರ್ಷದ ಮಂಗಳೂರು ಗಣೇಶೊತ್ಸವದ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಸೆ.13 ರಂದು ಸಂಜೆ 6 ಕ್ಕೆ ನಡೆಯಲಿದ್ದು ಆಬಳಿಕ ಸಂಜೆ 7 ಕ್ಕೆ ಶ್ರೀ ವಿನಾಯಕನ ಶೋಭಯಾತ್ರೆ ಶಿವಾಜಿ ಮಂಟಪದಿಂದ ಹೊರಡಲಿದೆ. ಈ ಶೋಭಯಾತ್ರೆಯಲ್ಲಿ ಹಿಂದೂ ಯುವ ಸೇನಾ ವಿವಿದ ಶಾಖೆಗಳ ದೃಶ್ಯರೂಪಕ, ಸ್ತಬ್ದಚಿತ್ರಗಳು ಭಾಗವಹಿಸಲಿದೆ. ಶೋಭಯಾತ್ರೆಯು ಶಿವಾಜಿ ಮಂಟಪದಿಂದ ಹೊರಟು ಕ್ಲಾಕ್ ಟವರ್, ಸಿಗ್ಮಲ್ ವೃತ್ತ, ಕೆ.ಎಸ್ ರಾವ್ ರಸ್ತೆ, ನವಭಾರತ್ ಸರ್ಕಲ್, ಡೊಂಗರಕೇರಿಯಾಗಿ ರಥಬೀದಿ ವೆಂಕಟರಮಣ ದೇವಸ್ಥಾನದ ಮಹಮ್ಮಾಯಿ ಕೆರೆಯಲ್ಲಿ ಜಲಸ್ತಂಬನ ವಾಗಲಿದೆ ಎಂದು ಹಿಂದೂ ಯುವ ಸೇನಾ ಗೌರವಾಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ, ಅಧ್ಯಕ್ಷ ಯಶೊಧರ ಚೌಟ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಶಿಕಾಂತ್ ನಾಗ್ವೇಕರ್, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಚೌಟ ತಿಳಿಸಿದ್ದಾರೆ.

