
Read Time:46 Second
ಮಂಗಳೂರು: ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು’ ಘೋಷವಾಕ್ಯದಡಿ ಹಿಂದೂ ಸಂಗಮ ಆಯೋಜನ ಸಮಿತಿ ಕದ್ರಿ, ಅರ್ಜುನ ವಸತಿ ಅತ್ತಾವರ ವತಿಯಿಂದ ಫೆ.7ರಂದು ಅತ್ತಾವರದ ಶ್ರೀ ಚಕ್ರಪಾಣಿ ಗೋಪಿನಾಥ ಕ್ಷೇತ್ರದಲ್ಲಿ ಬೃಹತ್ ಹಿಂದು ಸಂಗಮ ಆಯೋಜಿಸಲಾಗಿದೆ.



ಸಭಾ ಕಾರ್ಯಕ್ರಮಕ್ಕೆ ಮುನ್ನ ಸಂಜೆ 5 ಗಂಟೆಗೆ ಅತ್ತಾವರಕಟ್ಟೆಯಿಂದ ವೈಭವದ ಶೋಭಾ ಯಾತ್ರೆ ನಡೆಯಲಿದೆ. 5:30ಕ್ಕೆ ಶ್ರೀಚಕ್ರಪಾಣಿ ಕ್ಷೇತ್ರದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಪಾಲ್ಗೊಳ್ಳುವಂತೆ ಪ್ರಕಟಣೆ ತಿಳಿಸಿದೆ.

