ಮಂಗಳೂರು: ತುರ್ತು ಸಂದರ್ಭಗಳಿಗಾಗಿ 2 ಹೊಸ ಸಹಾಯವಾಣಿ ಸಂಖ್ಯೆಗಳನ್ನ ಬಿಡುಗಡೆ ಮಾಡಿದ ಮೆಸ್ಕಾಂ

0 0
Read Time:2 Minute, 5 Second

ಮಂಗಳೂರು: ಸಾರ್ವಜನಿಕರು ತಮ್ಮ ಗಂಭೀರ ಸಮಸ್ಯೆಗಳನ್ನು ತಿಳಿಸಲು ಹಾಗೂ ತುರ್ತು ಪರಿಸ್ಥಿತಿಗಳನ್ನು ತಿಳಿಸಲು ಸಹಾಯವಾಗುವ ನಿಟ್ಟಿನಲ್ಲಿ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಮೆಸ್ಕಾಂ) ಎರಡು ಹೊಸ ದೂರವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ.

ಸಾರ್ವಜನಿಕರು ತುರ್ತು ಸಂದರ್ಭಗಳಲ್ಲಿ ಮೆಸ್ಕಾಂನ 8277883388 ಅಥವಾ 0824-2950953 ಸಂಖ್ಯೆಗೆ ಕರೆ ಮಾಡಬುದಾಗಿದೆ.ಈ ಸಂಖ್ಯೆಗಳನ್ನು ಗಂಭೀರ ಮತ್ತು ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸಬೇಕು. ಹಾಗೂ ಇತರ ಸಾಮಾನ್ಯ ಸೇವೆಗಳಿಗೆ, ಉಚಿತ ಸಹಾಯವಾಣಿ 1912 ಮತ್ತು ಸ್ಥಳೀಯ ಕಚೇರಿ ಸ್ಥಿರ ದೂರವಾಣಿ ಸಂಖ್ಯೆಗಳನ್ನು ಬಳಸಬೇಕು ಎಂದು ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.ತುಕ್ಕು ಹಿಡಿದ, ದುರ್ಬಲ ವಿದ್ಯುತ್ ತಂತಿಗಳು ಮತ್ತು ಶಿಥಿಲಗೊಂಡ ಕಂಬಗಳ ತಪಾಸಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ವರ್ಷ, ಗಾಳಿಯ ವೇಗ ಹೆಚ್ಚಾಗಿದ್ದು, ಇದರಿಂದಾಗಿ ಮೆಸ್ಕಾಂಗೆ ಅಪಾರ ನಷ್ಟ ಉಂಟಾಗಿದೆ. ವಿದ್ಯುತ್ ಕಂಬಗಳು ಮತ್ತು ತಂತಿಗಳನ್ನು ಬದಲಾಯಿಸಲು ಸಾಕಷ್ಟು ಹಣ ಖರ್ಚು ಮಾಡಲಾಗುತ್ತಿದೆ. ಮೆಸ್ಕಾಂ ತನ್ನ ಹಣಕಾಸಿನ ಸಂಪನ್ಮೂಲಗಳನ್ನು ಬಳಸಿಕೊಂಡು ಸಾಧ್ಯವಾದಷ್ಟು ಬೇಗ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ. ಯಾವುದೇ ತಂತಿಗಳು, ಕಂಬಗಳು ಅಥವಾ ಟ್ರಾನ್ಸ್ ಫಾರ್ಮರ್‌ಗಳು ದುರ್ಬಲ ಅಥವಾ ತುಕ್ಕು ಹಿಡಿದಿರುವ ಮತ್ತು ಮೆಸ್ಕಾಂಗೆ ತಿಳಿದಿಲ್ಲವೆಂದು ಸಾರ್ವಜನಿಕರು ತಿಳಿದಿದ್ದರೆ, ಅವರು ಸ್ಥಳೀಯ ಮೆಸ್ಕಾಂ ಸಿಬ್ಬಂದಿಗಳ ಗಮನಕ್ಕೆ ತರಬೇಕು. ಸ್ಪಂದಿಸದಿದ್ದರೆ ಮೇಲಧಿಕಾರಿಗಳ ಗಮನಕ್ಕೆ ತರಬೇಕು ಎಂದು ಮೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *