ಪೇರಳೆ ಹಣ್ಣಿನ ಆರೋಗ್ಯ ಪ್ರಯೋಜನಗಳು..

0 0
Read Time:3 Minute, 20 Second

ಅತ್ಯಂತ ರುಚಿಕರವಾಗಿದ್ದರೂ ಬಹುಕಾಲ ನಿರ್ಲಕ್ಷಿಸಲ್ಪಟ್ಟ ಹಣ್ಣು ಪೇರಳೆ. ಇತ್ತೀಚಿನ ವರ್ಷಗಳಲ್ಲಿ ಇದರ ಆರೋಗ್ಯದ ಪ್ರಯೋಜನಗಳು ಹೆಚ್ಚು ಬೆಳಕಿಗೆ ಬರುತ್ತಿದ್ದಂತೆ ಮೌಲ್ಯವೂ ಹೆಚ್ಚುತ್ತಿದೆ. ವಾಸ್ತವದಲ್ಲಿ ಬಹಳ ಆರೋಗ್ಯಕರ ಹಣ್ಣು ಎಂದು ಬಣ್ಣಿಸಲಾಗುವ ಸೇಬು, ದ್ರಾಕ್ಷಿ, ಬಾಳೆ ಹಣ್ಣಿಗಿಂತಲೂ ಪೇರಳೆ ಹಣ್ಣಿನ ಆರೋಗ್ಯದ ಪ್ರಯೋಜನಗಳು ಒಂದು ತೂಕ ಹೆಚ್ಚೇ ಎನ್ನಬಹುದು.

ಮಧುಮೇಹ ನಿಯಂತ್ರಣಕ್ಕೆ ಸಹಕಾರಿಪೇರಳೆ ಹಣ್ಣು ಗ್ಲುಕೋಸ್ ಅನ್ನು ರಕ್ತಕ್ಕೆ ಬಿಟ್ಟುಕೊಡುವುದು ನಿಧಾನ. ಪೇರಳೆ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿದೆ. ಹಾಗಾಗಿ ಮಧುಮೇಹ ನಿಯಂತ್ರಣಕ್ಕೆ ಪೇರಳೆ ಸಹಕಾರಿಯಾಗಿದೆ. ಇದರಲ್ಲಿರುವ ಫೈಬರ್ ಅಂಶವು ಮಧುಮೇಹಿಗಳಲ್ಲಿ ಉಂಟಾಗುವ ಮಲಬದ್ಧತೆಯನ್ನು ನಿವಾರಿಸಲು ಸಹಕಾರಿ.

ಜೀರ್ಣ ಕ್ರಿಯೆಗೆ ಸಹಕಾರಿಪೇರಳೆ ಹಣ್ಣಿನಲ್ಲಿರುವ ಫೈಬರ್ (ನಾರಿನ ಅಂಶ) ಜೀರ್ಣ ಕ್ರಿಯೆಯನ್ನು ಸುಧಾರಿಸುತ್ತದೆ. ಕರುಳಿನಲ್ಲಿ ಆಹಾರವು ಸುಗಮವಾಗಿ ಹೊರಹೋಗಲು ಸಹಾಯ ಮಾಡುತ್ತದೆ.

ರೋಗ ನಿರೋಧಕ ಶಕ್ತಿಪೇರಲೆ ಹಣ್ಣಿನಲ್ಲಿ ವಿಟಮಿನ್ ಸಿ ಜೀವಸತ್ವ ಸಮೃದ್ಧವಾಗಿದೆ. ಹಾಗಾಗಿ ಸಾಮಾನ್ಯವಾದ ಸೋಂಕುಗಳು, ರೋಗಣುಗಳ ವಿರುದ್ಧ ಹೋರಾಡಲು ಸಹಕಾರಿ.

ಹೃದಯದ ಆರೋಗ್ಯಕ್ಕೆ ಒಳ್ಳೆಯದುಪೇರಳೆ ಹಣ್ಣಿನಲ್ಲಿರುವ ಫೈಬರ್ ಅಂಶವು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದಲ್ಲದೇ ಪೇರಳೆಯಲ್ಲಿ ಹೆಚ್ಚಿನ ಪ್ರಮಾಣದ ಸೋಡಿಯಂ ಮತ್ತು ಪೋಟ್ಯಾಶಿಯಮ್ ಅಂಶವಿದೆ. ಇದು ರಕ್ತದ ಒತ್ತಡವನ್ನು ಸಮತೋಲನದಲ್ಲಿ ಇರಿಸುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು.

ಮಲಬದ್ಧತೆ ನಿವಾರಣೆಪೇರಲೆ ಹಣ್ಣಿನಲ್ಲಿರುವ ಹೆಚ್ಚಿನ ಪ್ರಮಾಣದ ನಾರಿನ ಅಂಶವು ಆಹರವನ್ನು ಸಲುಭವಾಗಿ ಜೀರ್ಣವಾಗಲು ಸಹಾಯ ಮಾಡುತ್ತದೆ. ಕರುಳಿನ ಚಲನೆಗೆ ಸಹಾಯ ಮಾಡುವ ಮೂಲಕ ಮಲಬದ್ಧತೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ಚರ್ಮದ ಆರೋಗ್ಯಕ್ಕೆ ಪೂರಕಪೇರಳೆ ಹಣ್ಣಿನಲ್ಲಿರುವ ವಿಟಮಿನ್ ಎ, ಸಿ, ಮತ್ತು ಕ್ಯಾರೋಟಿನ್, ಲೈಕೋಪಿನ್ ಅಂಶಗಳು ಚರ್ಮವನ್ನು ಸುಕ್ಕುಗಳಿಂದ ತಡೆಯಲು ಸಹಕಾರಿಯಾಗಿದೆ.

ಪೇರಳೆ ಹಣ್ಣು ಪೋಷಕಾಂಶಗಳ ಕಣಜವಾಗಿದೆ. ಪೇರಲವು 21% ವಿಟಮಿನ್ ಎ ಅನ್ನು ಹೊಂದಿರುತ್ತದೆ ಇದು ನಿಮ್ಮ ಚರ್ಮವನ್ನು ಹೊಳಪು ಮಾಡಲು ಮತ್ತು ಲೋಳೆಯ ಪೇರಳೆಗಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಹಣ್ಣಿನಲ್ಲಿ 20%  ಇದೆ. ಇದು ಗರ್ಭಿಣಿ ಮಹಿಳೆಯರ ಆರೋಗ್ಯಕ್ಕೆ ಸಹಕಾರಿಯಾಗಿದೆ. ಪೇರಲದಲ್ಲಿರುವ ಲೈಕೋಪೀನ್ ಚರ್ಮವನ್ನು ನೇರಳಾತೀತ ಕಿರಣಗಳಿಂದ ರಕ್ಷಿಸುತ್ತದೆ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಅನ್ನು ತಡೆಯುತ್ತದೆ. ಪೇರಲದಲ್ಲಿ ಬಾಳೆಹಣ್ಣುಗಳಿಗಿಂತ ಹೆಚ್ಚು ಪೆಟ್ಯಾಸಿಯಮ್ ಇದೆ ಮತ್ತು ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *