ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ ನ್ಯೂಸ್‌ : 1526 ʻಹೆಡ್‌ ಕಾನ್‌ ಸ್ಟೇಬಲ್ಸ್‌ʼ, ʻASIʼ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

0 0
Read Time:2 Minute, 32 Second

ಉದ್ಯೋಗಾಕಾಂಕ್ಷಿಗಳಿಗೆ ಗಡಿ ಭದ್ರತಾ ಪಡೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಗಡಿ ಭದ್ರತಾ ಪಡೆಯಲ್ಲಿ 1526 ಹೆಡ್‌ ಕಾನ್‌ ಸ್ಟೇಬಲ್ಸ್‌, ASI ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಕೇಂದ್ರೀಯ ಪೊಲೀಸ್‌ ಪಡೆಗಳಲ್ಲಿ ಎಎಸ್‌ ಐ ಹಾಗೂ ಹೆಡ್‌ ಕಾನ್‌ ಸ್ಟೇಬಲ್ಸ್‌ ಹುದ್ದೆಗಳಿಗಾಗಿ ನೇಮಕಾತಿ ನಡೆಸಲಾಗುತ್ತಿದೆ.

ಇವು ಸೈನೋಗ್ರಾಫರ್‌ ಹಾಗೂ ಗುಮಸ್ತಾ ಹುದ್ದೆಗಳಾಗಿದ್ದು, ಒಟ್ಟಾರೆಯಾಗಿ 1526 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಜೂ.9ರಂದು ಅಧಿಸೂಚನೆ ಪ್ರಕಟವಾಗಲಿದ್ದು, ಅರ್ಜಿ ಸಲ್ಲಿಕೆಗೆ ಅಂದಿನಿಂದಲೇ ಅವಕಾಶ ಇರಲಿದೆ. ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಪಿಯು ವಿದ್ಯಾರ್ಹತೆ ಹಾಗೂ ಟೈಪಿಂಗ್ ಹಾಗೂ ಸ್ಟೆನೋಗ್ರಾಫಿ ತಿಳಿದವರು ಅರ್ಹತೆ ಪಡೆದಿದ್ದಾರೆ.

12ನೇ ತರಗತಿ ತೇರ್ಗಡೆಯಾದ 1526 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ನೇಮಕಾತಿಗಳನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ನಡೆಸುತ್ತಿದೆ. ಇದಕ್ಕಾಗಿ, ಅಧಿಕೃತ ವೆಬ್ಸೈಟ್ ಪೋರ್ಟಲ್ನಲ್ಲಿ ನೋಟಿಸ್ ನೀಡಲಾಗಿದೆ.

ಹುದ್ದೆ ಹೆಸರು: ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್, ಹೆಡ್ ಕಾನ್ಸ್ಟೇಬಲ್

ಹುದ್ದೆಗಳ ಸಂಖ್ಯೆ: ಒಟ್ಟು 1526

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 09-06-2024
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 08-07-2024

ಅರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ 12 ನೇ ತರಗತಿ, ಡಿಪ್ಲೊಮಾ ಇತ್ಯಾದಿ ವಿದ್ಯಾರ್ಹತೆಯನ್ನು ಹೊಂದಿರಬೇಕು.

ವಯೋಮಿತಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 30 ವರ್ಷ.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಪೂರ್ಣ ವಿವರಗಳಿಗಾಗಿ ನೋಟಿಸ್ ನೋಡಿ.

ಅರ್ಜಿ ಪ್ರಕ್ರಿಯೆ: ನೀವು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ವೆಬ್ಸೈಟ್ಗೆ ಹೋಗಿ ಅಧಿಸೂಚನೆಯನ್ನು ಓದಿ ಅರ್ಜಿಯನ್ನು ಪೂರ್ಣಗೊಳಿಸಬಹುದು.

ಅಧಿಕೃತ ವೆಬ್ಸೈಟ್: https://rectt.bsf.gov.in/

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *